ಮೈಸೂರು: ಯಡಿಯೂರಪ್ಪ ಅವರು ಸಿಎಂ ಅದಮೇಲೆ ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿದೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಸಿಎಂ ಬಿಎಸ್‍ವೈಯನ್ನು ಹಾಡಿ ಹೊಗಳಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರ ಆಗಿದ್ದರಿಂದ ನಾನು ಸಿಎಂ ಸ್ವಾಗತ ಮಾಡಲು ಬಂದೆ. ನನ್ನ ಕ್ಷೇತ್ರಕ್ಕೆ ಬಂದಾಗ ಅವರನ್ನು ಸ್ವಾಗತ ಮಾಡೋದು ನನ್ನ ಕರ್ತವ್ಯ ಅದಕ್ಕಾಗಿ ಬಂದಿದ್ದೇನೆ ಹೊರತು ರಾಜಕಾರಣ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಬಂದಾಗಲೂ ಬಂದಿದ್ದೇನೆ. ನಾನು ಊರಲ್ಲಿ ಇಲ್ಲವಾದರೆ ಮಾತ್ರ ಬಂದಿರೋಲ್ಲ ಎಂದು ಹೇಳಿದರು.
Advertisement
Advertisement
ಸಿಎಂ ಯಡಿಯೂರಪ್ಪ ಬಂದ ಮೇಲೆ ಚೆನ್ನಾಗಿ ಮಳೆ ಬೆಳೆ ಆಗಿದೆ. ಬರ ಇತ್ತು ಎಲ್ಲ ಹೋಗಿ ನದಿ, ಕೆರೆ-ಕಟ್ಟೆಗಳು ತುಂಬಿದೆ. ಕಳೆದ ಬಾರಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಹೀಗೆ ಆಗಿತ್ತು. ಪ್ರವಾಹ ಸಹ ಬಂದಿತ್ತು. ನಾನು ಆಗ ಗೃಹಮಂಡಳಿ ಅಧ್ಯಕ್ಷನಾಗಿದ್ದೆ. ಆಗ ಪ್ರವಾಹದ ಸಂತ್ರಸ್ತರಿಗೆ ಗೃಹಮಂಡಳಿಯಿಂದ ಮನೆ ಕಟ್ಟಿಕೊಟ್ಟಿದ್ದೇವು. ಈಗಲೂ ಬಿಎಸ್‍ವೈ ಪ್ರವಾಹ ಸಂಬಂಧ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
Advertisement
ಸಿಎಂ ಆಗಮನಕ್ಕೂ ಮುನ್ನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಜಿಟಿಡಿ, ದಸರಾ ವಿಚಾರವಾಗಿ ನಡೆದ ಮೊದಲ ಸಭೆಯಲ್ಲೂ ಭಾಗಿಯಾಗಿದ್ದರು. ಆದರೆ ಬಹುತೇಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ದಸರಾ ಸಭೆಗೆ ಗೈರಾಗಿದ್ದರು.