ಮೈಸೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 6 ಮಂದಿ ಆರೋಪಿಗಳ ವಿರುದ್ಧ 1,499 ಪುಟಗಳಷ್ಟು ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಮೂರನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ
ಬಂಧಿಸಲಾಗಿದ್ದ 7 ಮಂದಿಯ ಪೈಕಿ ಒಬ್ಬ ಆರೋಪಿಯ ಪಾತ್ರ ಘಟನೆಯಲ್ಲಿ ಇಲ್ಲ ಎಂದು ಸಾಬೀತಾಗಿದೆ. ಆತನನ್ನು ಬಿಟ್ಟು ಉಳಿದ 6 ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 397, 376 ಬಿ, 109, 120 ಬಿ, 334, 325, 326 ಆರೋಪಿಗಳ ವಿರುದ್ಧ ಹಾಕಲಾಗಿದೆ.
ಬಂಧಿತ ಆರೋಪಿಗಳು ತಮಿಳುನಾಡಿನ ಕೂಲಿ ಕಾರ್ಮಿಕರಾಗಿದ್ದರು. ಇವರು ಆಗಾಗ ಮೈಸೂರಿಗೆ ಬಂದು ಹೋಗುತ್ತಿದ್ದರು. ಮೈಸೂರಿನ ಬಂಡಿಪಾಳ್ಯ ಎಪಿಎಂಸಿಗೆ ತರಕಾರಿ ಕೊಳ್ಳಲು ಬರುವ ಓರ್ವ ಆರೋಪಿ ಚಾಲಕನ ಜೊತೆ ಇನ್ನುಳಿದವರು ಬರುತ್ತಿದ್ದರು. ಬಂದು ಹೋಗುವ ವೇಳೆ ಎಲ್ಲರೂ ಮದ್ಯಪಾನ ಮಾಡಿಯೇ ತೆರಳುತ್ತಿದ್ದರು. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‍ಮೇಲ್ – ನಕಲಿ ಎಸಿಬಿ ಅಧಿಕಾರಿ ಅರೆಸ್ಟ್
ಲಲಿತಾದ್ರಿಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಆರು ಮಂದಿ ಆರೋಪಿಗಳು ಕಳೆದ ಆಗಸ್ಟ್ 24ರಂದು ಬಂದಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಕಾಲೇಜು ವಿದ್ಯಾರ್ಥಿನಿ ಹಾಗೂ ಸ್ನೇಹಿತ ಏಕಾಂತದಲ್ಲಿ ಇರೋದನ್ನ ನೋಡಿಯೇ ಅಟ್ಯಾಕ್ ಮಾಡಿದ್ದಾರೆ. ಯುವತಿ ಸ್ನೇಹಿತನಿಗೆ ಥಳಿಸಿ ಪೆÇದೆಯೊಳಗೆ ಸಂತ್ರಸ್ತೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಯುವಕ ಹಾಗೂ ಸಂತ್ರಸ್ತೆಯಿಂದ 3 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ್ದರು. ಈ ಯತ್ನ ವಿಫಲವಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.