ಮೈಸೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಫ್ರಾನ್ಸ್ ಪ್ರಜೆಯೊಬ್ಬರ ಜೀವವನ್ನು ಮೈಸೂರು ಮೂಲದ ವೈದ್ಯರೊಬ್ಬರು ಉಳಿಸಿ ನಿಷ್ಠೆಯಿಂದ ಕರ್ತವ್ಯ ಪಾಲಿಸಿದ್ದಾರೆ.
ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಫ್ರಾನ್ಸ್ ಪ್ರಜೆಯೊಬ್ಬರಿಗೆ ಸಿಂಕೋಪಾಲ್ ಸಮಸ್ಯೆ ಕಾಣಿಸಿಕೊಂಡಿದೆ. ಅದೇ ವಿಮಾನದಲ್ಲಿ ಪ್ಯಾರಿಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಮೈಸೂರಿನ ಮಕ್ಕಳ ತಜ್ಞರಾದ ಡಾ. ಪ್ರಭುಲಿಂಗಸ್ವಾಮಿ ತಕ್ಷಣ ಫ್ರಾನ್ಸ್ ಪ್ರಜೆಗೆ ವಿಮಾನದಲ್ಲೇ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಫ್ರಾನ್ಸ್ ಪ್ರಜೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಾ. ಪ್ರಭುಲಿಂಗಸ್ವಾಮಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಏರ್ ಫ್ರಾನ್ಸ್ ಸಂಸ್ಥೆ ನೂರು ಯುರೋ ಅನ್ನು ಉಡುಗೊರೆಯಾಗಿ ನೀಡಿದೆ.
Advertisement
ವಿಶ್ವದ ಅತ್ಯುನ್ನತ ವಿಮಾನಯಾನ ಸಂಸ್ಥೆಯೆನಿಸಿರುವ ಏರ್ ಫ್ರಾನ್ಸ್ ಸಂಸ್ಥೆಯೂ ಇಮೇಲ್ ಮೂಲಕ ಡಾ. ಪ್ರಭುಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿದೆ. ಬಿಡುವಿನಲ್ಲಿದ್ದರು ತಮ್ಮ ಕರ್ತವ್ಯವನ್ನು ಮರಿಯದ ಡಾ. ಪ್ರಭುಲಿಂಗಸ್ವಾಮಿ ಅವರ ಕೆಲಸ ನಿಜಕ್ಕೂ ಮೆಚ್ಚಲೇಬೇಕು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv