ಮೈಸೂರು: ಮೈಸೂರು ದಸರಾದ ಹಿನ್ನೆಲೆ ದಿನವೂ ಒಂದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಇಂದು ಐದನೇ ದಿನವಾಗಿದ್ದು, ಮ್ಯಾರಥಾನ್ ಓಟ ಆಯೋಜನೆ ಮಾಡಲಾಗಿದೆ.
ದಸರಾ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್ ಮ್ಯಾರಥಾನ್‍ಗೆ ಚಾಲನೆ ನೀಡಿದರು. ಮ್ಯಾರಥಾನ್ ನಲ್ಲಿ ಮೈಸೂರಿನ ಜನತೆ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳು, ಯುವಕ, ಯುವತಿಯರು ಭಾಗಿಯಾಗಿದ್ದಾರೆ.
ಮೈಸೂರಿನ ಓವಲ್ಸ್ ಮೈದಾನದಲ್ಲಿ ಮ್ಯಾರಥಾನ್ ಓಟವನ್ನು ಪ್ರಾರಂಭ ಮಾಡಲಾಗಿದ್ದು, ಮೈಸೂರಿನ ಪ್ರಮುಖ ರಸ್ತೆಯಲ್ಲಿ ಮ್ಯಾರಥಾನ್ ಓಟವನ್ನು ಏರ್ಪಡಿಸಲಾಗಿದೆ.
ಮ್ಯಾರಥಾನ್ ಉದ್ಘಾಟನೆಗೆ ತಡವಾಗಿ ಬಂದ ಸಚಿವರ ವಿರುದ್ಧ ಮೈಸೂರಿಗರು ಅಸಮಾಧಾನ ಹೊರ ಹಾಕಿದ್ರು. ಬೆಳ್ಳಗ್ಗೆ ಆರು ಗಂಟೆಗೆ ಪ್ರಾರಂಭವಾಗಬೇಕಿದ್ದ ಮ್ಯಾರಥಾನ್ ಓಟ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಒಂದೂವರೇ ಗಂಟೆ ತಡವಾಗಿ ಬಂದ ಕಾರಣ ಬಿಸಿಲಿನಲ್ಲಿ ಓಡಬೇಕಾ ಅಂತ ಮೈಸೂರಿಗರು ಆಕ್ರೋಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv