ಮೈಸೂರು: ಚಿರತೆ ಮರಿಗಳೆರಡು ಬೋನಿಗೆ ಬಿದ್ದ ಘಟನೆ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನ ಎಚ್ ಡಿ ಕೋಟೆಯ ಬೀಚನಹಳ್ಳಿ ಬಳಿ ಸೆರೆಯಾಗಿದೆ. ಹಲವು ದಿನಗಳಿಂದ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸುತ್ತಿತ್ತು. ಚಿರತೆಯ ಉಪಟಳಕ್ಕೆ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಬೋನು ಇರಿಸಲಾಗಿತ್ತು.
Advertisement
Advertisement
ಇಂದು ಬೆಳಗ್ಗೆ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ. ನೀರಾವರಿ ಇಲಾಖೆ ಪಾಳುಬಿದ್ದ ಕಟ್ಟಡದ ಸಮೀಪ ಸೆರೆಯಾಗಿದೆ. ಬೋನಿಗೆ ಬಿದ್ದರೂ ಚಿರತೆ ಮರಿಗಳ ಘರ್ಜನೆ ಜೋರಾಗಿಯೇ ಇತ್ತು. ಎರಡು ಮರಿಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಸದ್ಯ ಚಿರತೆ ಮರಿ ಸೆರೆಯಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!