ಬಾಲಿವುಡ್ (Bollywood) ನಟಿ ರಾಖಿ ಸಾವಂತ್ ವಿರುದ್ಧ ಮೈಸೂರು (Mysore) ಹುಡುಗ ಆದಿಲ್ (Adil) ಗುಡುಗಿದ್ದಾರೆ. ರಾಖಿ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಆದಿಲ್, ತಮಗೆ ರಾಖಿಯಿಂದ ಆದ ತೊಂದರೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದಾಗಿ ಹೇಳಿಕೊಂಡಿದ್ದಾರೆ. ರಾಖಿಯಿಂದ ತಮಗೆ ಏನೆಲ್ಲ ಮೋಸ (Cheating) ಆಗಿದೆ ಎಂದು ಪತ್ರಿಕಾಗೋಷ್ಠಿ ಮಾಡಿಯೇ ಹೇಳುತ್ತೇನೆ ಎಂದಿದ್ದಾರೆ.
ಆದಿಲ್ ತನ್ನನ್ನು ಮದುವೆಯಾಗಿ ವಂಚಿಸಿದ್ದಾನೆ. ಹಿಂಸೆ ನೀಡಿದ್ದಾನೆ. ಅಲ್ಲದೇ, ತನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನೆ ಎಂದು ರಾಖಿ (Rakhi Sawant) ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್ ಬಂಧನವಾಗಿತ್ತು. ಆನಂತರ ಜೈಲಿನಿಂದಲೇ ತನ್ನನ್ನು ಕೊಲ್ಲುವುದಾಗಿ ಆದಿಲ್ ಹೆದರಿಸುತ್ತಿದ್ದಾನೆ ಎಂದೂ ರಾಖಿ ಮಾತನಾಡಿದ್ದರು.
ನಾನು ಯಾರಿಗೂ ಮೋಸ ಮಾಡಿಲ್ಲ. ನನಗೆ ಮೋಸವಾಗಿದೆ. ಕೋಟ್ಯಾಂತರ ರೂಪಾಯಿ ಯಾರು, ಯಾರಿಗೆ ಕೊಡಬೇಕು ಎನ್ನುವುದನ್ನು ಸಾಕ್ಷಿ ಸಮೇತ ತರುತ್ತೇನೆ. ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಸುಮ್ಮನಿದ್ದೆ. ಅದು ತಪ್ಪು ಅನಿಸುತ್ತಿದೆ. ಎಲ್ಲವನ್ನೂ ಮಾಧ್ಯಮಗೋಷ್ಠಿ ಮಾಡಿಯೇ ಹೇಳುತ್ತೇನೆ ಎಂದು ಆದಿಲ್ ಹೇಳಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]