ಮಂಡ್ಯ: ಟಿಪ್ಪರ್‌ವೊಂದು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಅಡಿಗನಹಳ್ಳಿ ಗ್ರಾಮದ ಮಧುಸೂದನ್ (8) ಮೃತ ವಿದ್ಯಾರ್ಥಿ. ಮಧುಸೂದನ್ ಎಂದಿನಂತೆ ಇಂದು ಬೆಳಗ್ಗೆ ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣನ್ನು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ವೇಗವಾಗಿ ಬಂದಿದೆ. ಈ ಸಂದರ್ಭದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ
ಮಧುಸೂದನ್‌ನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನಿಗೆ ಡಿಕ್ಕಿ ಹೊಡೆದ ಟಿಪ್ಪರ್ ಡಿಬಿಎಲ್ ಕಂಪನಿಗೆ ಸೇರಿದ್ದು, ಈ ಭಾಗದಲ್ಲಿ ಈ ಕಂಪನಿಯ ಟಿಪ್ಪರ್‌ಗಳು ಪ್ರತಿನಿತ್ಯ ಹತ್ತಾರು ಸಂಚಾರ ಮಾಡುತ್ತಿದ್ದು, ಮಣ್ಣು ತುಂಬಿಕೊಂಡು ಬರುವಾಗತ್ತು ಖಾಲಿ ಹೋಗುವಾಗ ಚಾಲಕರು ವೇಗವಾಗಿ ಗ್ರಾಮದ ಮಧ್ಯ ಹೋಗುತ್ತಾರೆ. ಈ ಅಪಘಾತ ಆಗಲು ಸಹ ಚಾಲಕನ ಅಜಾಗರೂಕತೆಯೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಸ್ತೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇದನ್ನೂ ಓದಿ: ನವಜಾತ ಶಿಶುವನ್ನು ರಕ್ಷಿಸಿದ ಶ್ವಾನ