ವಿಜಯನಗರ: ಜಿಲ್ಲೆಯ ಹೂವಿನಹಡಗಲಿ (Hoovina Hadagali) ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು (Mylara Lingeshwara Karnika) ಅತ್ಯಂತ ಸಂಭ್ರಮ, ಸಡಗರದಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವೃತವನ್ನು ಆಚರಿಸಿದ ರಾಮಪ್ಪ ಗೊರವಯ್ಯ, ಸೋಮವಾರ ಸಂಜೆ 5:30ಕ್ಕೆ ಹದಿನೈದು ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೇ ಎನ್ನುತ್ತಲೇ ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕವಾಣಿ(ವರ್ಷದ ಭವಿಷ್ಯವಾಣಿ) ನುಡಿದಿದ್ದಾರೆ.
Advertisement
ಪ್ರತಿ ವರ್ಷ ಭರತ ಹುಣ್ಣಿಮೆ ಸಮಯದಲ್ಲಿ ಮೈಲಾರದ ಮೈಲಾರಲಿಂಗೇಶ್ವರನ ಜಾತ್ರೆ ನಡೆಯುತ್ತದೆ. ಜಾತ್ರೆ ಪ್ರಯುಕ್ತ ಭರತ ಹುಣ್ಣಿಮೆಯ ಎರಡು ದಿನಗಳ ನಂತರ ಮೈಲಾರದ ಡೆಂಕನಮರಡಿಯಲ್ಲಿ ವರ್ಷದ ಭವಿಷ್ಯವಾಣಿ ಎಂದು ನಂಬಿಕೊಂಡು ಬಂದಿರುವ ಕಾರ್ಣಿಕೋತ್ಸವ ನಡೆಯುತ್ತದೆ. ಇದನ್ನೂ ಓದಿ: ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ: ಸ್ವಪಕ್ಷದ ವಿರುದ್ಧ ಶಾಸಕ ಅಲ್ಲಮಪ್ರಭು ಪಾಟೀಲ್ ಅಸಮಾಧಾನ
Advertisement
Advertisement
ಮೈಲಾರಲಿಂಗೇಶ್ವರನ 2024ರ ಕಾರ್ಣಿಕ ವಾಣಿ ಬರದಿಂದ ಕಂಗಾಲಾಗಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 2023ರಲ್ಲಿನ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ನಾಡಿನ ರೈತರು ಅಕ್ಷರಶಃ ಕಂಗಾಲಾಗಿದ್ದರು. ಎರಡು, ಮೂರು ಬಿತ್ತನೆ ಮಾಡಿದರೂ ಮಾಡಿದ ಖರ್ಚು ಬಾರದಂತಾಗಿ ರೈತರು ದಿಕ್ಕು ತೋಚದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೇಸಿಗೆಗೂ ಮುನ್ನವೇ ನಾಡಿನ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಆದರೆ ಮೈಲಾರದಲ್ಲಿ ರಾಮಪ್ಪ ಗೊರವಯ್ಯ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕ ನೆರೆದಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತು. ಇದನ್ನೂ ಓದಿ: ನಂಬರ್ ಗೇಮ್‌ನಲ್ಲಿ ಮೂರು ಪಕ್ಷಗಳು – ಬಿಜೆಪಿ ಅತೃಪ್ತರು, ರೆಡ್ಡಿ ನಡೆ ಕುತೂಹಲ
Advertisement
ಮೈಲಾರಲಿಂಗೇಶ್ವರನ ಕಾರ್ಣಿಕವಾಣಿಯನ್ನು ಆಲಿಸಲು ಮೈಲಾರಕ್ಕೆ ಆಗಮಿಸಿದ್ದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬರಗಾಲದಿಂದ ರೈತಾಪಿ ವರ್ಗದ ಜನರು ಸೇರಿದಂತೆ ನಾಡಿನ ಜನರು ಬರಗಾಲವನ್ನು ಅನುಭವಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಅನುಕೂಲ ಆಗಲಿದೆ. ಭವಿಷ್ಯದ ದಿನಗಳಲ್ಲಿ ಮಳೆ ಬೆಳೆ ಸಮೃದ್ಧಿಯಿಂದ ಕೂಡಿರಲಿದೆ ಎಂದು ಕಾರ್ಣಿಕವನ್ನು ವಿಶ್ಲೇಷಿಸಿದ್ದಾರೆ.
ಕಾರ್ಣಿಕದ ಬಗ್ಗೆ ಅಪಸ್ವರ:
ಗೊರವಯ್ಯ ರಾಮಪ್ಪ ಕಾರ್ಣಿಕದ ಬಗ್ಗೆ ಸ್ವತಃ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ಎತ್ತಿದ್ದಾರೆ. ಈ ವರ್ಷದ ಕಾರ್ಣಿಕ ಸತ್ಯವಾಗಲ್ಲ. ನಿಯಮ – ಸಂಪ್ರದಾಯಗಳನ್ನು ಗಾಳಿಗೆ ತೂರಿ ಗುರುಪೀಠದ ನಿಯಮ ಪಾಲಿಸದೇ ಕಾರ್ಣಿಕ ನುಡಿದಿದ್ದಾರೆ. ಇದು ಕೇವಲ ಗೊರವಯ್ಯ ರಾಮಪ್ಪನ ನುಡಿ, ಇದು ದೈವ ವಾಣಿ ಅಲ್ಲ. ಕಾರ್ಣಿಕವನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಹಲವು ವರ್ಷಗಳಿಂದ ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪ ಹಾಗೂ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ವಡೆಯರ್ ನಡುವೆ ವೈಯಕ್ತಿಕ ಪ್ರತಿಷ್ಠೆ ಭಿನ್ನಾಭಿಪ್ರಾಯ ನಡೆಯುತ್ತಿದೆ. ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರತಿಷ್ಠೆಯ ಕದನ ನಡೆಯುತ್ತಿರುವುದು ಭಕ್ತರ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.