ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಜೊತೆ ಲೈಂಗಿಕ ಕ್ರಿಯೆ ನಡೆಸಲು ಮುಂದಾದಾಗ ನೈಜ ಸತ್ಯ ತಿಳಿದುಬಂದಿದ್ದು, ಇದೀಗ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.
ನಡೆದಿದ್ದೇನು..?
2016ರಲ್ಲಿ ಜೋಡಿ ಮದುವೆಯಾಗಿದೆ. ಕೆಲ ದಿನಗಳ ಕಾಲ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿರಲಿಲ್ಲ. ಈ ವೇಳೆ ಆಕೆ ಪೀರಿಯೆಡ್ಸ್ ನೆಪ ಹೇಳಿ 6 ದಿನ ಪತಿಯಿಂದ ದೂರ ಉಳಿದು ಮತ್ತೆ ಮರಳಿದಳು.
Advertisement
Advertisement
ಇದಾದ ಬಳಿಕವೂ ಪತ್ನಿ ಸೆಕ್ಸ್ ಗೆ ಒಪ್ಪಿರಲಿಲ್ಲ. ಇದರಿಂದ ರೋಸಿಹೋಗಿದ್ದ ಪತಿ, ಬಲವಂತವಾಗಿ ಸೆಕ್ಸ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪತ್ನಿಯ ಜನನಾಂಗ ನೋಡಿ ಪತಿಗೆ ಶಾಕ್ ಆಗಿದೆ. ಆಕೆ ಮಹಿಳೆಯಾಗಿದ್ದರೂ ಜನನಾಂಗ ಮಾತ್ರ ಪುರುಷರಂತೆ ಇತ್ತು. ಇದನ್ನು ಕಂಡು ಆತ ಗಾಬರಿಗೊಳಗಾಗಿದ್ದಾನೆ. ಅಲ್ಲದೆ ತನಗೆ ಮೋಸ ಆಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ಸೌಂಡ್ ಕಡಿಮೆ ಮಾಡಲು ಹೇಳಿದ ಕಾನ್‍ಸ್ಟೇಬಲ್- ಬಿಯರ್ ಬಾಟ್ಲಿಯಲ್ಲಿ ಹೊಡೆದು ಎಸ್ಕೇಪ್
Advertisement
Advertisement
ನ್ಯಾಯಾಲಯದ ಆದೇಶ ಮೇರೆಗೆ ವ್ಯಕ್ತಿ ತನ್ನ ಪತ್ನಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾನೆ. ಈ ವೇಳೆ ಅಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಆಕೆಗೆ ಗರ್ಭಕೋಶ, ಗರ್ಭನಾಳ ಸೇರಿಧಮತೆ ಒಳಗಿನ ರಚನೆ ಮಹಿಳೆಯಂತೆ ಇತ್ತು. ಆದರೆ ಹೊರಗೆ ಜನನಾಂಗ ಮಾತ್ರ ಪುರುಷರಂತೆ ಇರುವುದು ಖಚಿತವಾಯಿತು. ಹೀಗಾಗಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಹಾಗೂ ಆಕೆ ಮಗು ಹುಟ್ಟಲು ಸಾಧ್ಯವಿಲ್ಲ ಎಂಬುದು ಸಾಬೀತಾಯಿತು.
ಸದ್ಯ ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯ ಸಿಗದ ಕಾರಣ ಪತಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾನೆ. ತನ್ನ ಪತ್ನಿ ಹಾಗೂ ಆಕೆಯ ಮನೆಯವರಿಂದ ತನಗೆ ಮೋಸ ಆಗಿದೆ ಎಂದು ದೂರಿದ್ದಾನೆ. ಪತಿಯ ದೂರಿನಂತೆ ಇದೀಗ ಕೋರ್ಟ್ 4ದಿನಗಳ ಒಳಗೆ ಉತ್ತರಿಸುವಂತೆ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರಿಸಲು ಮೋದಿ ಸೂಚನೆ