– ಧರ್ಮದ ಮುಂದೆ ಅಧರ್ಮ ಗೆದ್ದಿದೆ
ಬಳ್ಳಾರಿ: ಕಾಂಗ್ರೆಸ್ (Congress) ಹಣ ಹಂಚಿಕೆ ಮಾಡದೆ ಇದರೆ ನನ್ನ ಗೆಲುವು ಆಗುತ್ತಿತ್ತು. ಧರ್ಮದ ಮುಂದೆ ಅಧರ್ಮ ಗೆದ್ದಿದೆ. ಈ ಸೋಲನ್ನ ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಸೋಲು ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ಹಣಬಲದಿಂದ ಗೆದ್ದಿದೆ. ಮುಸ್ಲಿಂ ಹಾಗೂ ಕುರುಬ ಸಮುದಾಯ ಹೆಚ್ಚಿರುವ ಕಡೆ ಮತ ಬರಲಿಲ್ಲ. ಚುನಾವಣೆ ಸಮಯದಲ್ಲಿ ಭಾಗ್ಯಲಕ್ಷ್ಮೀ ಹಣ ಹಾಕಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ ಹೊಣೆ ನಾನೇ ಹೊರುವೆ ಎಂದರು. ಇದನ್ನೂ ಓದಿ: ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣಗೆ ಗೆಲುವು
ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಸಚಿವ ಶಿವರಾಜ್ ತಂಗಡಗಿ ಬಂದು ಹಣ ಹಂಚಿದ್ದಾರೆ. ಸಿಎಂ (CM Siddaramaiah) ಬಂದಿರೋದು ಹಣ ಹಂಚಿರೋದು ನನ್ನ ಸೋಲಿಗೆ ಮುಳುವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್
ಈ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುವೆ. ಮುಂದಿನ ದಿನ ನನಗೆ ಅಥವಾ ದಿವಾಕರ್ ಯಾರಿಗೆ ಟಿಕೆಟ್ ನೀಡಲಿ. ಬಿಜೆಪಿ (BJP) ಗೆಲವು ನಿಶ್ಚಿತ ಎಂದು ಹೇಳಿದರು. ಇದನ್ನೂ ಓದಿ: ನಾವು ಓಲೈಕೆ ಮಾಡಲ್ಲ, ಮುಸ್ಲಿಮರು ನಮ್ಗೆ ಮತ ಹಾಕಲ್ಲ: ಸಿ.ಟಿ ರವಿ