ಬಳ್ಳಾರಿ: ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳದೇ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಾದ ಪತ್ರಕ್ಕೆ ಸಹಿ ಹಾಕಿದ ಬಳಿಕ ನಾಪತ್ತೆಯಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ಸದನಕ್ಕೆ ಆಗಮಿಸುತ್ತಾರಾ? ಆಗಮಿಸಿದರೆ ಯಾರ ಪರ ನಿಲ್ತಾರೆ ಎನ್ನುವ ಪ್ರಶ್ನೆಗಳು ಎಲ್ಲರನ್ನ ಕಾಡ್ತಿವೆ.
ಈ ನಡುವೆ ನಾನು ಕಾಂಗ್ರೆಸ್ ಪಕ್ಷದ ಶಾಸಕ. ನನ್ನ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಹೊರತು ಬಿಜೆಪಿಗೆ ಅಲ್ಲ ಅಂತ ಆನಂದ್ ಸಿಂಗ್ ಪರವಾಗಿ ಅವರ ಬೆಂಬಲಿಗರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಗನ್ ಮ್ಯಾನ್, ಚಾಲಕನನ್ನು ಬಿಟ್ಟು ಪತ್ನಿ ಜೊತೆ ಕಾರಿನಲ್ಲಿ ಆನಂದ್ ಸಿಂಗ್ ಹೋಗಿದ್ದು ಎಲ್ಲಿಗೆ?
ವಿಜಯನಗರದ ಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಜನತೆಯ ಋಣ ತೀರಿಸುವ ಜವಾಬ್ದಾರಿ ನನ್ನದು. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ಕಿವಿ ಕೊಡಬೇಡಿ ಅಂತಾ ಸಂದೇಶ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಅನ್ನೋದಕ್ಕೆ ಉತ್ತರಿಸಿದ್ರು ಹೆಚ್‍ಡಿಕೆ
ಅನಾರೋಗ್ಯ ಕಾರಣ ಪ್ರತಾಪ್ ಗೌಡ ಪಾಟೀಲ್ ಕೂಡ ಹೊರ ರಾಜ್ಯದಲ್ಲಿದ್ದು, ವಿಶ್ವಾಸಮತ ಪರೀಕ್ಷೆ ವೇಳೆ ಸದನದಲ್ಲಿ ಇರ್ತಾರೆ ಅಂತಾ ಅವರ ಕುಟುಂಬ ಹೇಳುತ್ತಿದೆ.