ಮೈಸೂರು: ಪಾರ್ಲಿಮೆಂಟ್‌ನಲ್ಲಿ (Parliament) ಸ್ಮೋಕ್ ಬಾಂಬ್ (Smoke Bomb) ಹಾಕಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನೋರಂಜನ್ ಅವರ ತಂದೆ ದೇವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.
ಸಂಸತ್ ಭವನದಲ್ಲಿ ಕಲಾಪದ ವೇಳೆ ಇಬ್ಬರು ಯುವಕರು ಏಕಾಏಕಿ ವೀಕ್ಷಕರ ಗ್ಯಾಲರಿಯಿಂದ ಹಾರಿ ಸ್ಮೋಕ್ ಬಾಂಬ್ ಹಾಕಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋರಂಜನ್ ಹಾಗೂ ಸಾಗರ್ ಶರ್ಮಾನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಆರೋಪಿ ಮನೋರಂಜನ್ ತಂದೆ ತಮ್ಮ ಮಗನ ಕುರಿತು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಲಾಪದ ವೇಳೆ ನುಗ್ಗಿದ ಯುವಕನನ್ನು ಹಿಡಿದು ಥಳಿಸಿದ ಸಂಸದರು
Advertisement
Advertisement
ನನ್ನ ಮಗ ಸ್ವಾಮಿ ವಿವೇಕಾನಂದರ ಪುಸ್ತಕ ಸೇರಿದಂತೆ ಸಮಾಜ ಸುಧಾರಕರ ಪುಸ್ತಕ ಓದುತ್ತಿದ್ದ. ಅಲ್ಲದೇ ಐಟಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮದುವೆ ಆಗಿಲ್ಲ. ನನ್ನ ಮಗನಿಗೆ ಯಾರಾದರೂ ಪ್ರಚೋದನೆ ಕೊಟ್ಟಿರಬೇಕು. ರೈತಾಪಿ ಮಗನಾಗಿ ನನ್ನ ಮಗ ಈ ರೀತಿ ಮಾಡಿರುವುದು ಖಂಡನೀಯ. ಯಾರ ಮಕ್ಕಳಾದರೂ ಈ ರೀತಿ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಯತ್ನ
Advertisement
ನಾವೂ ಅಲ್ಪಸ್ವಲ್ಪ ರಾಜಕೀಯದಲ್ಲಿದ್ದೇವೆ. ಸಂಘಟನೆ ಎಲ್ಲ ಆಗಲ್ಲ. ನಾವೇನಿದ್ದರೂ ದುಡಿದು ತಿನ್ನಬೇಕು ಎಂದು ಹೇಳಿದ್ದೆ. ಆದರೆ ಅವನು ಅತಿಯಾದ ವಿದ್ಯಾಭ್ಯಾಸವೇ ಅವನಿಗೆ ಮುಳುವಾಯಿತಾ ಎಂಬುದು ನನಗೆ ಗೊತ್ತಿಲ್ಲ. ಸಂಘಟನೆ ಕಟ್ಟುವ ಕೆಲಸ ಬಿಟ್ಟರೇ ಬೇರೆ ಯಾವುದೇ ಸಮಾಜಘಾತುಕ ಕೆಲಸದಲ್ಲಿ ನನ್ನ ಮಗ ತೊಡಗಿಸಿಕೊಂಡಿಲ್ಲ. ಇವತ್ತು ಅವನು ಏನು ಮಾಡಿದ್ದಾನೋ ಅದು ಖಂಡನೀಯ, ನಾನು ಅದನ್ನ ಒಪ್ಪಲ್ಲ. ನನ್ನ ಮಗ ಆಗಿರಲಿ ಅಥವಾ ಯಾವನೇ ಆಗರಿಲಿ ಅವರನ್ನ ಗಲ್ಲಿಗೇರಿಸಿ ಎಂದರು. ಇದನ್ನೂ ಓದಿ: ಸಂಸತ್ ದಾಳಿ ಘಟನೆಯನ್ನು ಎಲ್ಲರೂ ಖಂಡಿಸಬೇಕು: ಸಿದ್ದರಾಮಯ್ಯ
Advertisement
ಪ್ರಧಾನಿ ನಮ್ಮ ದೇವರು. ಅವರ ಬಗ್ಗೆ ನನ್ನ ಮಗನಿಗೆ ಭಾರೀ ಅಭಿಮಾನವಿತ್ತು. ಚಿಕ್ಕಮಕ್ಕಳನ್ನು ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಬಹುದು. ಆದರೆ ದೊಡ್ಡವರನ್ನು ಹಾಗೆ ಕೇಳಲು ಆಗುವುದಿಲ್ಲ. ಪಾಸ್ ಕೊಡುವುದು ಒಳ್ಳೆಯದಕ್ಕೆ. ಅದನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಬೇಕು. ಪ್ರತಾಪ್ ಸಿಂಹ ಅವರು ಒಳ್ಳೆಯ ಮನುಷ್ಯ. ಅವರನ್ನು ಕೆಟ್ಟವರು ಎಂದು ಹೇಳಲಾಗುವುದಿಲ್ಲ. ನಾವು ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನೇ ಕೊಡಿಸಿದ್ದೇವೆ. ಅದರೂ ಈ ರೀತಿಯ ಕೃತ್ಯ ಮಾಡಿರುವುದು ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಪ್ರತಾಪ್ ಸಿಂಹ ಬಹಳ ಬುದ್ಧಿವಂತ, ಅವರ‍್ಯಾಕೆ ಇಂಥವರಿಗೆ ಪಾಸ್ ಕೊಟ್ರೋ?: ಡಿಕೆಶಿ ಕಿಡಿ