Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್‌ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್‌ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ

Crime

13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್‌ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ

Public TV
Last updated: August 14, 2025 7:39 pm
Public TV
Share
2 Min Read
Dharmasthala 13 Year Sister Case Nitin
SHARE

ಮಂಗಳೂರು: ಧರ್ಮಸ್ಥಳದ ಅರಣ್ಯದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೆ ಎಂದ ಅನಾಮಿಕನ ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ನಡುವೆಯೇ ವ್ಯಕ್ತಿಯೊಬ್ಬರು ಎಸ್‌ಐಟಿ ಮುಂದೆ ಹಾಜರಾಗಿ, 13 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ತನ್ನ ಸಹೋದರಿ ಕಾಣೆಯಾಗಿದ್ದಳು ಎಂದು ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಲಮುಡೂರು ಗ್ರಾಮದ ಯುವತಿ ಹೇಮಾವತಿ 13 ವರ್ಷಗಳ ಹಿಂದೆ ಕಾಣೆಯಾಗಿದ್ದಾಳೆ ಎಂದು ಆಕೆ ಸಹೋದರ ನಿತಿನ್ ಎಸ್‌ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 13 ವರ್ಷಗಳ ಹಿಂದೆ ಆಕೆ ನಾಪತ್ತೆಯಾದಾಗ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.‌ ನಿನ್ನ ತಂಗಿ ಸಿಕ್ಕರೆ ತಿಳಿಸುತ್ತೇವೆ ಎಂದು ಹೇಳಿದ್ದರು. 13 ವರ್ಷಗಳ ಹಿಂದೆ ಆಕೆ ಧರ್ಮಸ್ಥಳಕ್ಕೆ ಹೋಗಿ ಬರುತ್ತೇನೆ ಎಂದು ನಮ್ಮ ಊರಿನ ಮಹಿಳೆ ಜೊತೆ ಹೋಗಿದ್ದಳು. ಆದರೆ, ಆ ಮಹಿಳೆ ಮನೆಗೆ ವಾಪಸ್ ಆಗಿದ್ದಾಳೆ. ನನ್ನ ತಂಗಿ ಮರಳಿ ಬಂದಿಲ್ಲ. ಈ ಬಗ್ಗೆ ಆ ಮಹಿಳೆಗೆ ಕೇಳಿದರೆ ಆಕೆ ಕೂಡ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಎಸ್‌ಐಟಿ ರಚನೆಯಾದ ಬಳಿಕ ನ್ಯಾಯ ಸಿಗುವ ವಿಶ್ವಾಸ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

ಈ ಬಗ್ಗೆ ನಿತಿನ್ ʻಪಬ್ಲಿಕ್‌ ಟಿವಿʼ ಜೊತೆ ಮಾತನಾಡಿದ್ದು, ನನ್ನ ಸಹೋದರಿ 2012ರಲ್ಲಿ ಕಾಣೆಯಾಗಿದ್ದಾಳೆ. ಆಕೆಯನ್ನ ಕರೆದುಕೊಂಡ ಹೋದ ಮಹಿಳೆ ಸರ್ಕಾರಿ ನೌಕರಿಯಲ್ಲಿದ್ದಾಳೆ. ಆಕೆ ಹೆಸರನ್ನು ಪೊಲೀಸರಿಗೆ ತಿಳಿಸಿದ್ದೇನೆ. ಆಕೆ ವಿರುದ್ಧವೂ ಪುಂಜಾಲಕಟ್ಟೆಯಲ್ಲಿ ದೂರು ನೀಡಿದ್ದೇನೆ. ಆಕೆ ಮನೆ ಬಳಿ ಹೋಗಿ ಜಗಳ ಮಾಡಿದ್ದೇನೆ. ಆದರೂ ಆಕೆ ಏನೂ ಹೇಳಿಲ್ಲ. 13 ವರ್ಷಗಳ ಹಿಂದೆ ಹೋರಾಟ ಮಾಡುವಷ್ಟು ಧೈರ್ಯ ಇರಲಿಲ್ಲ. ಹಾಗಾಗಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ನಮ್ಮ ಸಹೋದರಿಗೆ ಏನಾಗಿದೆ ಅನ್ನೋದು ಗೊತ್ತಾಗಬೇಕು. ಆಕೆ ಹೋದಾಗಿನಿಂದ ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಈಗ ಮನೆಯಲ್ಲಿ ಮಾತನಾಡಿ ದೂರು ನೀಡಲು ಬಂದಿದ್ದೇನೆ.‌ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಲು ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನನ್ನ ತಂಗಿ ಕಾಣೆಯಾದಾಗ 17 ವರ್ಷ ಈಗ ಆಕೆ ವಯಸ್ಸು 31-32 ವರ್ಷ ಇರಬಹುದು, ನಾವು ಧರ್ಮಸ್ಥಳ ಕ್ಷೇತ್ರದ ಮೇಲೆ ಯಾವುದೇ ಅಪಪ್ರಚಾರ ಮಾಡುವ ಉದ್ದೇಶ ಹೊಂದಿಲ್ಲ. ಕ್ಷೇತ್ರದ ಮೇಲೆ ಗೌರವವಿದೆ. ಆದರೆ, ನಮಗೆ ನ್ಯಾಯ ಸಿಗಬೇಕು. ನಮ್ಮ ತಂಗಿ ಏನಾದಳು? ಎಲ್ಲಿಗೆ ಹೋದಳು? ಇದ್ದಾಳೋ? ಇಲ್ವೋ? ಗೊತ್ತಾಗಬೇಕು ಅಷ್ಟೆ. ನನ್ನ ತಂಗಿಯನ್ನ ಕರೆದುಕೊಂಡು ಹೋದ ಮಹಿಳೆಯ ವಿರುದ್ಧವು ಪೊಲೀಸರು ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ

TAGGED:crimedharmasthalaDharmasthala Mass Burial CaseMangaluru
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Chikkaballapura crime
Chikkaballapur

ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಲಾಟೆ – ನೇಣುಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ

Public TV
By Public TV
1 minute ago
Shivaganga Basavaraj PA
Bengaluru City

ಶಾಸಕ ಬಸವರಾಜ್ ಶಿವಗಂಗಾ ಪಿಎ ಆತ್ಮಹತ್ಯೆ

Public TV
By Public TV
29 minutes ago
Yatnal
Bengaluru City

ಪ್ರಾದೇಶಿಕ ಪಕ್ಷ ಮಾಡಿ, 2028ಕ್ಕೆ ನಾನೇ ಮುಖ್ಯಮಂತ್ರಿ ಆಗ್ತೀನಿ – ಯತ್ನಾಳ್

Public TV
By Public TV
53 minutes ago
Indian rupee
Latest

ಮಧ್ಯಪ್ರಾಚ್ಯ ಸಂಘರ್ಷ; ಡಾಲರ್‌ ಎದುರು ದಾಖಲೆಯ 92.52 ಕ್ಕೆ ಕುಸಿದ ರೂಪಾಯಿ ಮೌಲ್ಯ

Public TV
By Public TV
55 minutes ago
Mandya Suicide
Crime

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದ ಮಗು ಪಾರು

Public TV
By Public TV
1 hour ago
US and Israeli attacks in Tehran
Latest

US-Israel-Iran War: ಕಚ್ಚಾತೈಲ ಬೆಲೆ ಏರಿಕೆ – ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿದ ಬೆಲೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?