ಬೆಂಗಳೂರು: ನಿಗಮ ಮಂಡಳಿ ವಿಚಾರವಾಗಿ ಸಿಎಂ, ಡಿಸಿಎಂ, ಸುರ್ಜೇವಾಲಾ (Surjewala) ಸಭೆ ನಡೆಸುತ್ತಿದ್ದಾರೆ ಆದರೆ ನನ್ನ ಅಭಿಪ್ರಾಯ ಕೇಳಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್(G. Parameshwara) ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಳೆದ ವಾರ ನಮ್ಮ ಜನರಲ್ ಸೆಕ್ರೆಟರಿ ಬಂದಾಗ ಸಿಎಂ, ಅಧ್ಯಕ್ಷರನ್ನು ಕರೆದು ಮಾತಾಡಿದ್ದಾರೆ. ನನಗೆ ನಮ್ಮ ಜೊತೆಗೆ ಚರ್ಚೆ ಮಾಡಿಲ್ಲ. ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ದರೆ ಒಳ್ಳೆಯದಾಗಿತ್ತು. ಯಾಕೆಂದರೆ ನಾನು ಸಹ ಎಂಟು ವರ್ಷಗಳ ಕಾಲ ಕೆಪಿಸಿಸಿ (KPCC) ಅಧ್ಯಕ್ಷನಾಗಿದ್ದೆ ಎಂದರು.
Advertisement
Advertisement
ರಾಜಕೀಯವಾಗಿ ಈ ಸಂದರ್ಭದಲ್ಲಿ ಯಾರನ್ನು ಮಾಡಿದರೆ ಅನುಕೂಲ ಆಗುತ್ತಿತ್ತು. ಯಾರು ಹಿರಿಯರು ಯಾರು ಅವರಿಗೂ ಗೊತ್ತಿದೆ. ನಮ್ಮ ಅಭಿಪ್ರಾಯ ಕೇಳಿ ಮಾಡಿದರೆ ಚೆನ್ನಾಗಿ ಇರುತ್ತಿತ್ತು. ಹೈಕಮಾಂಡ್ (Congress High Command) ಅನುಮತಿಯಿಂದ ಅವರು ಮಾಡುತ್ತಿದ್ದಾರೆ. ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆಯಾದರೆ ಒಳ್ಳೆಯದು ಎಂದು ಹೇಳಿದರು.
Advertisement
ತೆಲಂಗಾಣದಲ್ಲಿ (Telangana) ಕರ್ನಾಟಕ ಸರ್ಕಾರದ ಜಾಹೀರಾತು ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಚುನಾವಣೆ ಆಯೋಗದ ಆಯುಕ್ತರು ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಹೆಚ್ಚು ಮಾಹಿತಿ ನನಗಿಲ್ಲ ಎಂದರು. ಇದನ್ನೂ ಓದಿ: ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳಿಗೆ 2 ಸಾವಿರ ಕೋಟಿ ಅನುದಾನ: ಡಿಕೆಶಿ
Advertisement
ಭ್ರೂಣ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳಲಿ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ? ಹೇಗೆ ನಡೆಯುತ್ತಿದೆ? ತನಿಖೆಯ ನಂತರ ಎಲ್ಲವೂ ಹೊರ ಬರಲಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ (CM Siddaramaiah) ಜನ ಸ್ಪಂದನ ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಸಮಸ್ಯೆ ಹೆಚ್ಚು ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊದಲು ಪೊಲೀಸ್ ಠಾಣೆಗೆ ಹೋಗಲು ಹೆದರುತ್ತಿದ್ದರು. ಈಗ ಯಾರು ಬೇಕಾದರೂ ಪೊಲೀಸ್ ಠಾಣೆ ಹೋಗಬಹುದು. ದೂರು ಕೊಡಬಹುದು, ಕೊಟ್ಟ ನಂತರ ಎಫ್‌ಐಆರ್ (FIR) ಮಾಡಬೇಕು ಎಂದು ನಾವು ಸೂಚನೆ ಕೊಟ್ಟಿದ್ದೇನೆ. ಅದಕ್ಕಾಗಿ ಹೆಚ್ಚೆಚ್ಚು ಜನ ಪೊಲೀಸ್ ಠಾಣೆಗಳಿಗೆ ಹೋಗುತ್ತಿದ್ದಾರೆ ಎಂದರು.
ಅಪರಾಧಗಳು ಹೆಚ್ಚಾಗುತ್ತಿವೆ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಯಾಕೆ ಜಾಸ್ತಿಯಾಗುತ್ತಿವೆ ಎಂದರೆ ನಾವು ಅವರಿಗೆ ಅವಕಾಶ ಕೊಡುತ್ತಿದ್ದೇವೆ. ದೂರು ತೆಗೆದುಕೊಂಡು ತನಿಖೆ ಮಾಡುತ್ತಿದ್ದೇವೆ. ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅದರಿಂದ ಜನ ವಿಶ್ವಾಸದ ಮೇಲೆ ಠಾಣೆಗಳಿಗೆ ಬರುತ್ತಿದ್ದಾರೆ. ಮೊದಲು ಇವರು ಠಾಣೆಗಳಿಗೆ ಬರಲು ಬಿಡುತ್ತಿರಲಿಲ್ಲ. ದೂರು ಕೊಟ್ಟರೆ ಪರಿಗಣಿಸುತ್ತಿರಲಿಲ್ಲ. ನಮ್ಮಲ್ಲಿ ಸೈಬರ್ ಕೇಸ್ ಹೆಚ್ಚಾಗುತ್ತಿವೆ. ಯಾರಿಗೆ ಎಲ್ಲಿ ಹೋಗಬೇಕು ಎಂದು ಗೊತ್ತಿರಲಿಲ್ಲ. ಎಲ್ಲಾ ಠಾಣೆಗಳಲ್ಲಿ ಸೈಬರ್ ಕೇಸ್ ತೆಗೆದುಕೊಳ್ಳಿ ಎಂದು ಹೇಳಿದ್ದೇವೆ. ಅದಕ್ಕೆ ಆಗಿರುವ ಸೈಬರ್ ಪೊಲೀಸ್ ಸ್ಟೇಷನ್ ಮಾಡಿದ್ದೇವೆ. ಪೊಲೀಸ್ ಠಾಣೆಗಳಲ್ಲಿ ದೂರು ತೆಗೆದುಕೊಂಡು ಬಳಿಕ ಸೇನ್ ಸ್ಟೇಷನ್ ಗಳಿಗೆ ರವಾನೆ ಆಗಲಿದೆ ಎಂದು ಹೇಳಿದರು.