ಗೋಲ್ಡ್ ಕೋಸ್ಟ್: ದಾಖಲೆಗಳನ್ನು ಮುರಿಯುವ ನಿರೀಕ್ಷೆಯನ್ನು ನಾನು ಮಾಡಿರಲಿಲ್ಲ. ಇಲ್ಲಿಗೆ ಬಂದ ಮೇಲೆ ನಾನು ದಾಖಲೆಗಳನ್ನು ಮುರಿಯಲೇ ಬೇಕಾಗಿತ್ತು. ನನಗೆ ಆಗುತ್ತಿರುವ ಸಂತಸವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹೇಳಿದ್ದಾರೆ.
ಕಾಮನ್‍ವೆಲ್ತ್ ಗೇಮ್ಸ್ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
Advertisement
ನಾನು ಈ ಪದಕ ಪಡೆಯಲು ತುಂಬಾ ಕಷ್ಟಪಟ್ಟಿದ್ದೆ. ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ಪದಕವಾಗಿದೆ. ಚಿನ್ನ ಗೆದ್ದಿರುವುದು ಬಹಳ ಸಂತಸ ತಂದಿದೆ ಎಂದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್
Advertisement
ನನ್ನ ಮುಂದಿನ ಗುರಿ ಏಷ್ಯಾನ್ ಗೇಮ್ಸ್. ಅಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ನಾನು ತುಂಬಾನೇ ಕಷ್ಟಪಡಬೇಕಾಗಿದೆ. ಮುಂದಿನ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡಬೇಕು. ಆದರೆ ಇಲ್ಲಿ ಅಂತಹ ಪ್ರತಿಸ್ಪರ್ಧೆ ಇರಲಿಲ್ಲ ಎಂದು ತಿಳಿಸಿದರು.
Advertisement
ಸ್ನ್ಯಾಚ್ ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 110 ಕೆಜಿ ಎತ್ತುವ ಮೂಲಕ ಮೀರಾಬಾಯಿ ಚಿನ್ನವನ್ನು ಗೆದ್ದರು. ಈ ವಿಭಾಗದಲ್ಲಿ ಶ್ರೀಲಂಕಾ ದಿನುಶಾ 155 ಕೆಜಿ ಎತ್ತುವ ಮೂಲಕ ಕಂಚು ಗೆದ್ದರೆ, ಮಾರಿಷಸ್ ನ ಮಾರಿ ಹನಿಟ್ರಾ 170 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು. ಒಂದು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
Advertisement
"My next target are the #AsianGames2018" – Words of a champ!#MirabaiChanu on getting India her first gold medal at #CWG2018 ????????#GC2018 #GC2018Weightlifting @IndiaSports @Ra_THORe @smritiirani pic.twitter.com/F7o9bU4oCW
— DD News (@DDNewslive) April 5, 2018