– ಎಂಜಿನಿಯರ್ ಓಕೆ, ಹೊಲದಲ್ಲಿ ಕೆಲಸ ಮಾಡೋನಾದ್ರೂ ಓಕೆ
ಬೆಂಗಳೂರು: ನನ್ನ ಮದುವೆಯಾಗುವ ಹುಡುಗ 40,000 ರೂ. ಆದ್ರೂ ದುಡಿಯಬೇಕು ಎಂದು ಚಂದನವನದ ಬೆಡಗಿ ಅದಿತಿ ಪ್ರಭುದೇವ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ಮಾತನಾಡುತ್ತಾ ನಟಿ, ತಾವು ಮದುವೆಯಾಗುವ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮನಸ್ಸನ್ನು ಅರ್ಥ ಮಾಡಿಕೊಂಡು ಹೋಗುವಂತೆ ಇರಬೇಕು. 30,000 ಅಥವಾ 40,000 ದುಡಿಯುತ್ತಾ ಇರಬೇಕು. ಮನೆ ನಡೆಸಲು ಎಷ್ಟು ಬೇಕೋ ಅದನ್ನು ದುಡಿಯಬೇಕು ಎಂದಿದ್ದಾರೆ.
Advertisement
Advertisement
ಅಲ್ಲದೆ ತಾನು ಮದುವೆಯಾಗುವ ಹುಡುಗ ಆತ ಅಪ್ಪ-ಅಮ್ಮ ಜೊತೆ ಇರಲೇ ಬೇಕು. ಆಗ ನಮ್ಮ ಅಪ್ಪ-ಅಮ್ಮನನ್ನು ಜೊತೆಗೆ ಆಗಾಗ ಅವರ ಮನೆಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿ ನಕ್ಕರು.
Advertisement
Advertisement
ನನಗೆ ಯಾವುದೇ ರೀತಿಯ ಹುಡುಗನನ್ನು ಹುಡುಕಿದರು ನಾನು ಅವರಿಗೆ ಸೆಟ್ ಆಗುತ್ತೇನೆ. ಎಂಜಿನಿಯರ್ ಹುಡುಗನೂ ಓಕೆ, ಹೊಲದಲ್ಲಿ ಕೆಲಸ ಮಾಡುವ ಹುಡುಗನೂ ಓಕೆ ಎಂದಿದ್ದಾರೆ. ಅದಕ್ಕೆ ನಮ್ಮ ಅಪ್ಪ-ಅಮ್ಮಗೆ ಫುಲ್ ಆಯ್ಕೆ ಇದೆ. ಅವರು ಯಾರನ್ನು ಹುಡುಕಿದರು ನಾನು ಅವರಿಗೆ ಸೆಟ್ ಆಗುತ್ತೇನೆ. ನಮ್ಮ ಮನೆಯಲ್ಲಿ ಯಾವಾಗ ಮದುವೆಯಾಗು ಅನ್ನುತ್ತಾರೆಯೋ ಅಂದೇ ಆಗುತ್ತೇನೆ. ಹೆತ್ತವರ ವಿರುದ್ಧ ನಾನು ಎಂದೂ ಮಾತನಾಡುವುದಿಲ್ಲ ಎಂದಿದ್ದಾರೆ.
ತನ್ನ ಜರ್ನಿ ಬಗ್ಗೆ ನೆನೆದ ಅದಿತಿ!
ನನ್ನ ಜರ್ನಿ ಬಗ್ಗೆ ನೆನೆಪಿಸಿಕೊಂಡರೆ ನನಗೆ ಇಷ್ಟು ದೂರ ಬಂದ್ನಾ ಅನ್ಸುತ್ತೆ. ನಮ್ಮ ಮನೆಯಲ್ಲಿ ಇಂಜಿನಿಯರ್ ಮಾಡಿಸಿದ್ದೆ ಮದುವೆ ಮಾಡಬೇಕು ಎಂಬ ಉದ್ದೇಶದಿಂದ. ಅವಳು ಚೆನ್ನಾಗಿ ಓದಿ, ಅವಳ ಕಾಲ ಮೇಲೆ ಅವಳು ನಿಲ್ಲಬೇಕು ಎಂಬ ಉದ್ದೇಶದಿಂದ ನಮ್ಮ ಅಪ್ಪ-ಅಮ್ಮ ಓದಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕು ಎಂದು ಯೋಚಿಸಿದ್ದರು. ನನಗೂ ಅಷ್ಟೇ ಇತ್ತು. ಆದರೆ ನನಗೆ ಇದ್ದ ಸಾಮರ್ಥ್ಯಕ್ಕೆ ನಮ್ಮ ಮನೆಯವರು ಬೆಂಬಲ ನೀಡಿದರು. ಅದಕ್ಕೆ ದೇವರು ಬೆಂಬಲ ಮತ್ತೆ ಆಶೀರ್ವಾದದಿಂದ ಇಲ್ಲಿವರೆಗೂ ಬಂದೆ ಎಂದಿದ್ದಾರೆ. ನಾನು ಯಾವುದನ್ನು ಬಯಸಿ ಪಡೆದುಕೊಂಡಿಲ್ಲ. ಆದರೆ ಬಂದ ಅವಕಾಶಕ್ಕೆ ಪರಿಶ್ರಮ ಹಾಕಿ ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಮದು ತಿಳಿಸಿದರು.
ಇದೇ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ನಟಿ, ತುಂಬಾ ಪ್ರಾಜೆಕ್ಟ್ ಇದೆ. ಆದರೆ ಪ್ರಸ್ತುತ 5ಡಿ, ಓಲ್ಡ್‍ಮಂಕ್ ಮತ್ತು ತೊತಪುರಿ ಇದೆ ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ನಮಗೆ ಒಳ್ಳೆದು ಕೆಟ್ಟದ್ದು ಎಂಬುದು ಗೊತ್ತಿಲ್ಲ. ಆದರೆ ಗಣೇಶನಿಗೆ ಎಲ್ಲ ತಿಳಿದಿರುತ್ತೆ. ನಮಗೆ ಏನು ಕೊಡಬೇಕು, ಏನು ಕೊಡಬಾರದು ಅಂತ ಅದಕ್ಕೆ ಅವನಿಗೆ ಬಿಟ್ಟಿದ್ದೇನೆ ಎಂದರು.
ಈ ಕೊರೊನಾ ಪರಿಸ್ಥಿತಿಯಲ್ಲಿ ಹಬ್ಬದ ಆಚರಣೆ ತುಂಬಾ ಕಷ್ಟ ಆಯ್ತು. ನನಗೆ ಮಾತ್ರವಲ್ಲ ಎಲ್ಲ ಜನರಿಗೂ ಹಬ್ಬ ಮಾಡುವಾಗ ಈ ಪರಿಸ್ಥಿತಿಯಲ್ಲಿ ಭಯ ಇದ್ದೇ ಇರುತ್ತೆ. ಎಲ್ಲರ ಮನೆಯಲ್ಲಿ ಖುಷಿಯಿಂದ ಯಾರು ಹಬ್ಬವನ್ನು ಆಚರಣೆಯನ್ನು ಮಾಡಿಲ್ಲ. ಎಷ್ಟೊ ಜನರ ಮನೆಯಲ್ಲಿ ಸಾವುಗಳು ಸಂಭವಿಸಿತು. ಈ ಪರಿಸ್ಥಿತಿಯಲ್ಲಿ ಯಾರು ಖುಷಿಯಿಂದ ಹಬ್ಬವನ್ನು ಆಚರಣೆ ಮಾಡುಲಾಗುವುದಿಲ್ಲ. ಆದರೆ ಭೂಮಿ ಮೇಲೆ ಎಲ್ಲದಕ್ಕೂ ಕೊನೆ ಎಂಬುದು ಇರುತ್ತೆ. ಇದಕ್ಕೂ ಕೊನೆ ಇದೆ ಎಂದು ಆಶಿಸಿದರು. ಏನೇ ಅದರೂ ಜೀವನ ಹೋಗುತ್ತ್ತಾ ಎಂದಿದ್ದಾರೆ.
ಚಂದನವನದಲ್ಲಿ ದೊಡ್ಡಮಟ್ಟದ ಪೆಟ್ಟು!
ಕೊರೊನಾ ಕಾರಣದಿಂದ ನಮ್ಮ ಚಂದನವನದಲ್ಲಿ ದೊಡ್ಡಮಟ್ಟದ ಪೆಟ್ಟು ಬಿದಿದ್ದೆ. ಅದರಲ್ಲಿ ನಟ, ನಟಿ, ಕಲಾವಿದರನ್ನು ಬಿಡಿ ತಂತ್ರಜ್ಞಾನರು, ಸಹಕಲಾವಿದರು ಇನ್ನೂ ಹಲವು ವಿಭಾಗದ ಜನರಿಗೆ ತುಂಬಾ ಕಷ್ಟವಾಗುತ್ತಿದೆ. ಒಂದು ಸಿನಿಮಾದಲ್ಲಿ 5- 10 ಜನರು ಪ್ರಮುಖ ಕಲಾವಿದರಿದ್ದರೆ ನೂರಾರು ಜನರು ತೆರೆ ಹಿಂದೆ ಮತ್ತು ಸಹಕಲಾವಿದರಾಗಿ ನಟಿಸುವವರು ಇರುತ್ತಾರೆ. ಅವರಿಗೆ ತುಂಬಾ ಪೆಟ್ಟು ಬಿದ್ದಿದೆ. ಅವರಿಗೆ ಕೆಲಸ ಮಾಡಿದರೆ ತಿನ್ನಲು ಊಟ ಸಿಗುತ್ತೆ ಅಂತಹವರಿಗೆ ತುಂಬಾ ಕಷ್ಟವಾಗಿದೆ ಎಮದು ಇದೇ ವೇಳೆ ಅದಿತಿ ಬೆಸರ ವ್ಯಕ್ತಪಡಿಸಿದರು.