ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಇದೀಗ ಮದುವೆಯ (Wedding) ಬಗ್ಗೆ ಮಾತಾಡಿದ್ದಾರೆ. ನಾನಾ ಕಾರ್ಯಕ್ರಮಗಳಲ್ಲಿ ಅನುಶ್ರೀಗೆ ಮದುವೆಯ ಬಗ್ಗೆ ಪ್ರಶ್ನಿಸಿದಾಗ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡುತ್ತಿದ್ದರು. ಇದೀಗ ಅಧಿಕೃತವಾಗಿಯೇ ಮದುವೆಯ ಬಗ್ಗೆ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ವರ್ಷವೇ ತಾವು ಮದುವೆ ಆಗೋದಾಗಿ ಹೇಳಿದ್ದಾರೆ. ಇದನ್ನೂ ಓದಿ:‘ಡೆವಿಲ್’ ಸಿನಿಮಾ ತುಂಬಾ ಡಿಫರೆಂಟ್ ಆಗಿದೆ: ಅಪ್‌ಡೇಟ್ ಕೊಟ್ಟ ವಿನಯ್
ಮದುವೆ ಬಗ್ಗೆ ಅಷ್ಟೇ ಅಲ್ಲ, ಮದುವೆಯಾಗೋ ಹುಡುಗ ಕೂಡ ಹೇಗಿರಬೇಕು? ಎಂದು ಅನುಶ್ರೀ ಮನಬಿಚ್ಚಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದಿದ್ದ ಅನುಶ್ರೀಗೆ ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಮದುವೆ ಕುರಿತು ಪ್ರಶ್ನಿಸಿದ್ದಾರೆ. ನಿಮ್ಮ ಹುಡುಗ ಹೇಗಿರಬೇಕು? ಮದುವೆ ಯಾವಾಗ ಎಂದು ಕೇಳಿದ್ದಾರೆ. ಇದನ್ನೂ ಓದಿ: ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ: ಅಪ್ಪು ಕುರಿತು ಅನುಶ್ರೀ ಭಾವುಕ ಪೋಸ್ಟ್
ಅದಕ್ಕೆ ಮಾತನಾಡಿದ ನಿರೂಪಕಿ, ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. ಈ ವರ್ಷವೇ ಮದುವೆ ಆಗುತ್ತೆ ಗ್ಯಾರಂಟಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಅನುಶ್ರೀ ಮಾತಿಗೆ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಹೌದಾ ಎಂದು ಮತ್ತೊಮ್ಮೆ ಕೇಳಿದ್ದಾರೆ. ಹೌದು. ಈ ವರ್ಷವೇ ಮದುವೆ ಆಗ್ತೀನಿ ಎಂದು ಅಧಿಕೃತವಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮಾರ್ಚ್‌ನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಅವರು ಹೇಳಿಕೊಂಡಿದ್ದರು. ಅಪ್ಪು ಕಟ್ಟಾ ಅಭಿಮಾನಿಯಾಗಿರುವ ಅನುಶ್ರೀ ಅವರು ಪುನೀತ್ ಹುಟ್ಟಿದಹಬ್ಬದಂದು ಸರ್ಪ್ರೈಸ್ ಇದೆ ಅಂತೆಲ್ಲಾ ಅವರದ್ದೇ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ, ಅಂದು ಯಾವ ಸರ್ಪ್ರೈಸ್ ಕೊಡಲಿಲ್ಲ. ಈಗ ತಮ್ಮ ಇನ್‌ಸ್ಟಾದಲ್ಲಿ ಲೈವ್ ಮಾಡಿದ್ದ ಸಮಯದಲ್ಲಿ 2025ರ ಒಳಗೆ ಮದುವೆ ಆಗೋದಾಗಿ ಘೋಷಿಸಿದ್ದಾರೆ.