ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ಸ್ಥಾನ ಹಂಚಿಕೆಯಾದ ಹಿನ್ನೆಲೆಯಲ್ಲಿ ಇಂದು ನೂತನ ಸಚಿವರುಗಳು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆ. ಜೆ. ಜಾರ್ಜ್‍ರವರು ಹೈಕಮಾಂಡ್‍ನ ವರಿಷ್ಠರು ನಾನು ಮಾಡಿದ ಕೆಲಸಗಳಿಗೆ ಗುರುತಿಸಿ ಸಚಿವ ಸ್ಥಾನ ನೀಡಿದ್ದಾರೆ. ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಖಾತೆಯನ್ನಾದರೂ ನೀಡಲಿ ನಾನು ನಿಭಾಯಿಸಲು ಸಿದ್ಧನಾಗಿದ್ದೇನೆಂದು ಹೇಳಿದ್ದಾರೆ. ಜನ ಸೇವೆಗಾಗಿ ನನ್ನ ಜೀವವನ್ನೇ ಮುಡಿಪಾಗಿಡುತ್ತೇನೆಂದು ತಿಳಿಸಿದ್ದಾರೆ. ಸಿಕ್ಕ ಯಾವುದೇ ಖಾತೆಯನ್ನು ನಿಷ್ಠೆಯಿಂದ ಜನರ ಅಭಿವೃದ್ಧಿ ಕಾರ್ಯಕ್ಕೆ ಶ್ರಮವಹಿಸಿ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
ಕಾಂಗ್ರೆಸ್ ಸರ್ಕಾರದ ಆರಂಭದಲ್ಲಿ ಜಾರ್ಜ್ ಅವರಿಗೆ ಆರಂಭದಲ್ಲಿ ಗೃಹ ಇಲಾಖೆಯನ್ನು ನೀಡಲಾಗಿತ್ತು. ಇದಾದ ಬಳಿಕ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಜಾರ್ಜ್ ವಹಿಸಿಕೊಂಡಿದ್ದರು. ಇದನ್ನೂ ಓದಿ: 1 ಕೋಟಿಯ ಕಾರು ಜೊತೆಗೆ 1 ವರ್ಷ ಡೀಸೆಲ್ ಭಾಗ್ಯ – ಮಾಜಿ ಸಿಎಂಗೆ ಜಾರ್ಜ್ ಭರ್ಜರಿ ಗಿಫ್ಟ್!
Advertisement
Advertisement
https://youtu.be/4QmHFwPxOGg