ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎ4 ಆರೋಪಿ ರಾಘವೇಂದ್ರನ ಪತ್ನಿ ಸಹನಾ ಕಣ್ಣೀರಿಟ್ಟಿದ್ದಾರೆ.
ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಟ ದರ್ಶನ್ (Darshan) ನನ್ನ ಗಂಡನಿಗೆ ಕಾನೂನು ನೆರವು ಕೊಡಿಸಬೇಕು ಎಂದು ಆರೋಪಿ ಪತ್ನಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಿಎಂ ಭೇಟಿಯಾಗಿ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ
ರಘು ನನಗೆ ಕೊಲೆ ಮಾಡ್ತೀವಿ ಅಂತಾ ಹೇಳಿ ಹೋಗಿರಲಿಲ್ಲ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ರಘು ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆ. ನನ್ನ ಗಂಡ ಕೇವಲ ದರ್ಶನ್ ಅಭಿಮಾನಿಯಷ್ಟೇ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ರಘು ಕೊಲೆ ಮಾಡಿಲ್ಲ. ದರ್ಶನ್ ಅವರ ಕರೆ ಬಂದಿರಬಹುದು. ರೇಣುಕಾಸ್ವಾಮಿಯನ್ನು ರಘು ಕರೆದುಕೊಂಡು ಹೋಗಿರಬಹುದು. ನನ್ನ ಗಂಡ ಕೊಲೆ ಮಾಡುವವನಲ್ಲ ಎಂದಿದ್ದಾರೆ.
ನನ್ನ ಮಗಳ ಬರ್ತ್‌ಡೇಗೆ ಮಾತ್ರ ದರ್ಶನ್ ಭೇಟಿ ಮಾಡಿದ್ವಿ. ಗಂಡನ ಪರ ಕಾನೂನು ಹೋರಾಟ ಮಾಡುವ ಶಕ್ತಿ ನನಗಿಲ್ಲ. ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಟ ದರ್ಶನ್ ನನ್ನ ಗಂಡನಿಗೆ ಕಾನೂನು ನೆರವು ಕೊಡಿಸಬೇಕು. ನಾನು ಪ್ರೀತಿಸಿ ತವರುಮನೆ ತೊರೆದು ಬಂದಿದ್ದೇನೆ. ನನಗೆ ನನ್ನ ಬಂಧುಬಳಗ ಯಾರಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡ ಬಂಧನವಾದಾಗ ವಿಚಾರಣೆ ತಂಡದಲ್ಲಿದ್ದ ಮಹಿಳಾ ಪಿಎಸ್‌ಐಗೆ ನೋಟಿಸ್
ರೇಣುಕಾಸ್ವಾಮಿ ಮರ್ಡರ್ ಬಗ್ಗೆ ನನ್ನೊಂದಿಗೆ ರಘು ಚರ್ಚಿಸಿಲ್ಲ. ಮರ್ಡರ್ ಆದ ಬಳಿಕ ಹಣ, ಒಡವೆ ಯಾವುದೇ ವಸ್ತುಗಳನ್ನು ನನಗೆ ಅವರು ಕೊಟ್ಟಿಲ್ಲ. ನಮ್ಮ ಮನೆಯಲ್ಲಿ ಹಣ ಸೀಜ್ ಆಗಿದೆ ಅನ್ನೋದು ಸುಳ್ಳು. ರೇಣುಕಾಸ್ವಾಮಿ ಪವಿತ್ರ ಗೌಡಗೆ ಮೆಸೇಜ್ ಮಾಡಿದ್ದು ತಪ್ಪು. ಆತನ ಕೊಲೆಯಿಂದಾಗಿ ಅವರ ಕುಟುಂಬ ನೋವಲ್ಲಿರುವಂತೆ, ನಾನು ಸಂಕಷ್ಟದಲ್ಲಿದ್ದೀನಿ ಎಂದಿದ್ದಾರೆ.
ನಾನು ಪೊಲೀಸ್ ತನಿಖೆಗೆ ಸಹಕರಿಸಿದ್ದೇನೆ. ಪ್ರಕರಣದ ಬಳಿಕ ನಾನೆಲ್ಲೂ ನಾಪತ್ತೆಯಾಗಿರಲಿಲ್ಲ. ನಾನು ಪೊಲೀಸ್ ಸಂಪರ್ಕದಲ್ಲಿ ಇದ್ದೆ. ಪೊಲೀಸರು ಸೂಚಿಸಿದ ತಕ್ಷಣ ಸ್ಥಳ ಮಹಜರು ಮಾಡಲು ಸಹಕರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ!