ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ: ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಹೇಳಿಕೆ

Public TV
1 Min Read
Renukaswamy Wife

ಚಿತ್ರದುರ್ಗ: ನನ್ನ ಗಂಡ ದರ್ಶನ್ (Darshan) ಅಭಿಮಾನಿಯಾಗಿರಲಿಲ್ಲ. ಅವರು ನಮ್ಮ ಜೊತೆ ಮೊನ್ನೆ ಕರೆ ಮಾಡಿ ಮಾತನಾಡಿದ್ದೇ ಕೊನೆ. ನಮಗೆ ನ್ಯಾಯ ಕೊಡಿಸಿ ಎಂದು ಕೊಲೆಯಾದ ರೇಣುಕಾಸ್ವಾಮಿ (Renukaswamy) ಪತ್ನಿ ಸಹನಾ ಹೇಳಿದ್ದಾರೆ.

ಚಿತ್ರನಟ ದರ್ಶನ್ ಗ್ಯಾಂಗ್‌ನಿಂದ ಬಲಿಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಪತಿಯ ಸಾವಿನ ಶಾಕ್‌ನಲ್ಲಿದ್ದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮನೆಯವರಿಗೆ ಹೀಗೆ ಆಗಿದೆ. ನಮಗೆ ನ್ಯಾಯ ಕೊಡಿಸಿ. ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ. ನಾನು ಗರ್ಭಿಣಿ. ಹೀಗಾಗಬಾರದಿತ್ತು. ತಾಯಿಯಾಗುತ್ತಿರುವ ಈ ವೇಳೆಯಲ್ಲಿ ಹೀಗಾದ್ರೆ ಏನ್ಮಾಡಲಿ ಎಂದು ಕಣ್ಣೀರಿಡುತ್ತಾ ಮಾತನಾಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

ದರ್ಶನ್ ಮೇಲೆ ಆರೋಪ ಬಂದಿರುವಾಗ ನ್ಯಾಯ ಕೊಡಿಸಲು ಜನ ಇದ್ದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ.. ಮುಂದೆ ಈ ಮಗುವಿಗೆ ಯಾರು ಬರ್ತಾರೆ. ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ರಾಜೀನಾಮೆ ನೀಡ್ತಾರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ತಾರೆ: ಡಿ.ಕೆ‌.ಸುರೇಶ್

Share This Article