ಮೈಸೂರು: ಬಡವರ ಪರವಾಗಿ ನನ್ನ ಹೃದಯ ಮಿಡಿಯುತ್ತದೆ. ನನಗೆ ಬಡವರ ಕಷ್ಟ ಗೊತ್ತಿದೆ. ಬಡವರ ಕಲ್ಯಾಣಕ್ಕಾಗಿ ನಾನು ದುಡಿಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಮೈಸೂರಿನಲ್ಲಿ ಸರ್ಕಾರದ ಫಲಾನುಭಾವಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ವಿಧಾನಸೌಧ (Vidhanasoudha) ದಲ್ಲಿ ಇಲ್ಲ. ನಮ್ಮ ಸರ್ಕಾರ ನಿಮ್ಮ ಮನೆಗಳಲ್ಲಿ ಇದೆ. ನಿಮ್ಮ ಬಳಿಗೆ ಬಂದು ಸರ್ಕಾರ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಬಡವರ ಪರ ಮಿಡಿಯುವ ಹೃದಯದ ನಾಯಕ. ಬಡವರ ಪರವಾಗಿ ಯಡಿಯೂರಪ್ಪ ಅವರು ಹತ್ತು ಹಲವು ಯೋಜನೆ ಜಾರಿಗೆ ತಂದರು. ನಾವು ಮಾಡಿರುವ ಒಳ್ಳೆಯ ಕೆಲಸಕ್ಕೆ ಜನರ ಬೆಂಬಲ ಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದರು. ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಕೊಂಡ ಮಾಜಿ ಸಚಿವ ಎ.ಮಂಜು
Advertisement
Advertisement
ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರದಲ್ಲಿ ವಿಪಕ್ಷಗಳು ಬದ್ಧತೆ ತೋರಲಿಲ್ಲ. ಪ. ಜಾತಿ – ಪ. ಪಂಗಡವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡರು. ಭಾಷಣದಿಂದ ದೀನ ದಲಿತರಿಗೆ ನ್ಯಾಯ ಸಿಗಲ್ಲ. ದೀನ ದಲಿತರು ಬೆಳೆಯಲಿಲ್ಲ. ಪರಿಶಿಷ್ಟ ಜಾತಿ, ಪಂಗಡವನ್ನು ಬರೀ ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಪಕ್ಷಗಳು ನೆನಪಿಸಿಕೊಳ್ಳುತ್ತಾರೆ. ನಾನು ಪ.ಜಾತಿ ಪ.ಪಂಗಡದ ಮೀಸಲಾತಿ ಹೆಚ್ಚಿಸಿದರೆ ಅದು ಆಗಲ್ಲ ಅಂತಾ ವಿಪಕ್ಷದವರು ಕೊಂಕು ಮಾತಾಡುತ್ತಾರೆ ಎಂದರು.
Advertisement
Advertisement
ಎಲ್ಲಿ ನೋವಿದೆಯೋ ಅಲ್ಲಿಗೆ ಸರ್ಕಾರ ಧಾವಿಸಿದೆ. ಸರ್ಕಾರ (Governemnt) ನಿಮ್ಮ ಪರವಿದೆ. ನೀವು ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದರೆ ಎಲ್ಲಾ ಕಾರ್ಯಕ್ರಮ ಮುಂದುವರಿಯುತ್ತವೆ. ಕೆಲವರು ಚುನಾವಣೆಗೆ ಮುಂಚೆ ಬೇಕಾಬಿಟ್ಟಿ ಭರವಸೆ ಕೊಡುತ್ತಾರೆ. ಚುನಾವಣೆಗಾಗಿ ಇವರು ಆಶ್ವಾಸನೆ ಕೊಡುತ್ತಿದ್ದಾರೆ. ಉಚಿತ ಅಕ್ಕಿ, ಉಚಿತ ವಿದ್ಯುತ್ ಹೀಗಾಗಲೆ ಹಲವು ಯೋಜನೆಗಳ ಮೂಲಕ ತಲುಪುತ್ತಿದೆ. ಮಾತಿನಲ್ಲಿ ಗ್ಯಾರಂಟಿ ಇಲ್ಲ. ಹೀಗಾಗಿ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಜನರನ್ನು ಯಾಮಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ನೈತಿಕತೆ ಇದೆ. ಬಡವರ ಪರ ಕೆಲಸ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಬಡವರ ಬದುಕಿಗೆ ಹೊಸ ಮನ್ವಂತರ ತಂದಿದ್ದೇವೆ ಎಂದು ಹೇಳಿದರು.