– ಯಾವ್ದೇ ಕಾರಣಕ್ಕೂ ಬಹಿರಂಗವಾಗಿ ಕ್ಷಮೆ ಕೇಳಲ್ಲ ಎಂದ ಎಂಎಲ್‌ಸಿ
ಮೈಸೂರು: ʻಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿʼ ಎಂಬ ಹೇಳಿಕೆಗೆ ಸಿಎಂ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾನಯ್ಯ (Yathindra Siddaramaiah) ಸ್ಪಷ್ಟನೆ ನೀಡಿದ್ದಾರೆ.
ನಾಲ್ವಡಿ ಅವರ ಕೊಡುಗೆಗಳನ್ನ ಗೌಣ ಮಾಡಬೇಕು ಅಂತ ಹೇಳಿಲ್ಲ. ಮೈಸೂರು ಅಭಿವೃದ್ಧಿಗೆ ನಾಲ್ವಡಿ (Nalvadi Krishnaraja Wodeyar) ಅವರನ್ನ ಬಿಟ್ರೆ ಹೆಚ್ಚು ಅನುದಾನ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ದೇನೆ. ನಮ್ಮಪ್ಪ ಮುಖ್ಯಮಂತ್ರಿಯಾದ ಮೇಲೆ ಕೊಟ್ಟಷ್ಟು ಅನುದಾನವನ್ನ ಬೇರೆ ಯಾವ ಮುಖ್ಯಮಂತ್ರಿಗಳೂ ಕೊಟ್ಟಿಲ್ಲ. ಅದನ್ನ ಮಾತ್ರ ನಾನು ಹೇಳಿದ್ದು. ಬಹಿರಂಗವಾಗಿ ಕ್ಷಮೆ ಕೇಳುವುದಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್ ಸಿಂಹ ಕಿಡಿ
ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ. ಸಣ್ಣ ವಿಚಾರವನ್ನ ತೆಗೆದುಕೊಂಡು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಹೇಳಿದ ಹೇಳಿಕೆಯಲ್ಲ. ನಾಲ್ವಡಿಯವರ ಬಗ್ಗೆ ಸಾಕಷ್ಟು ಗೌರವ ಇದೆ. ಅವರ ಆಡಳಿತ ಎಲ್ಲರಿಗೂ ಸ್ಫೂರ್ತಿ. ಒಡೆಯರ್ ಅವರ ಬಗ್ಗೆ ಸಭೆ ಸಮಾರಂಭಗಳಲ್ಲಿ ಗೌರವಯುತವಾಗಿ ಮಾತನಾಡಿದ್ದೇವೆ. ನಾಲ್ವಡಿ ಅವರ ಕೊಡುಗೆಗಳನ್ನು ಗೌಣ ಮಾಡಬೇಕು ಅನ್ನೊ ದೃಷ್ಟಿಯಿಂದ ಮಾತನಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ
ನಾಲ್ವಡಿ ಅವರನ್ನ ಬಿಟ್ರೆ ಸ್ವಾತಂತ್ರ‍್ಯ ಬಂದ ಮೇಲೆ ಮೈಸೂರು ನಗರಕ್ಕೆ ಯಾವುದೇ ಮುಖ್ಯಮಂತ್ರಿ ಕೊಡದಷ್ಟು ಅನುದಾನವನ್ನ ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ಅದನ್ನ ತಪ್ಪಾಗಿ ಅರ್ಥೈಸುವ ಅಗತ್ಯ ಇಲ್ಲ. ವಿರೋಧ ಪಕ್ಷಗಳು ವಿರೋಧ ಮಾಡಬೇಕು ಅದಕ್ಕಾಗಿ ಮಾತನಾಡುತ್ತಿದ್ದಾರೆ ಅಷ್ಟೇ. ಯಾವುದೇ ದುರುದ್ದೇಶದಿಂದ ಕೊಟ್ಟ ಹೇಳಿಕೆಯಲ್ಲ. ಸಿದ್ದರಾಮಯ್ಯ ಅವರ ಕೊಡುಗೆಯನ್ನ ಹೈಲೈಟ್ ಮಾಡುವ ಉದ್ದೇಶದಿಂದ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಸಿಕ್ಕ ಮಾದಕ ವಸ್ತುಗೆ ಮಹಾರಾಷ್ಟ್ರ ನಂಟು – MDMA ತಯಾರಿಕೆಗೆ ಸೇಫ್ ಜೋನ್ ಆಗ್ತಿದಿಯಾ ನಗರ?
ನನ್ನ ಹೇಳಿಕೆಗೆ ಏನೇ ಆಕ್ಷೇಪಗಳು ಬಂದ್ರು ಬರಲಿ. ನನ್ನ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿದ್ದಾರೆ. ನಾಲ್ವಡಿ ಅವರಿಗೆ ಅವಮಾನ ಮಾಡುವ ದೃಷ್ಟಿಯಿಂದ ಹೇಳಿಕೆ ಕೊಟ್ಟಿಲ್ಲ. ನಾಲ್ವಡಿ ಅವರು ಕೊಟ್ಟಂತಹ ಕೊಡುಗೆಗಳು ಮೈಸೂರು ಹಾಗೂ ಕರ್ನಾಟಕಕ್ಕೆ ಸಾಕಷ್ಟು ಇದೆ. ಅವರ ಕೊಡುಗೆಯನ್ನ ಕಡಿಮೆ ಮಾಡಿ ನಮ್ಮ ಸರ್ಕಾರ ಜಾಸ್ತಿ ಮಾಡಿದೆ ಎಂದು ಹೇಳಲು ಹೊರಟಿದ್ದಲ್ಲ. ಮೈಸೂರು ಅಭಿವೃದ್ಧಿಗೆ ನಾಲ್ವಡಿ ಅವರನ್ನ ಬಿಟ್ರೆ ಹೆಚ್ಚು ಅನುದಾನ ಕೊಟ್ಟಿರುವುದು ಸಿಎಂ ಸಿದ್ದರಾಮಯ್ಯ. ಬೇಕಿದ್ರೆ ಅಂಕಿ ಅಂಶವನ್ನು ತೆಗೆದು ನೋಡಲಿ. ನಮ್ಮಪ್ಪ ಮುಖ್ಯಮಂತ್ರಿಯಾದ ಮೇಲೆ ಕೊಟ್ಟಷ್ಟು ಅನುದಾನವನ್ನ ಬೇರೆ ಯಾವ ಮುಖ್ಯಮಂತ್ರಿಗಳೂ ಕೊಟ್ಟಿಲ್ಲ. ಅದನ್ನ ಮಾತ್ರ ನಾನು ಹೇಳಿದ್ದು. ಬಹಿರಂಗವಾಗಿ ಕ್ಷಮೆ ಕೇಳುವುದಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ.