ಮುಂಬೈ: ಕ್ರಿಕೆಟ್ (Cricket) ವೃತ್ತಿಜೀವನದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಅನೇಕ ದಾಖಲೆಗಳನ್ನ ಉಡೀಸ್ ಮಾಡಿರುವ ಟೀಂ ಇಂಡಿಯಾ (Team India) ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಕಾರ್ಯಕ್ರಮವೊಂದರಲ್ಲಿ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
'My father thought I won't pass the school board exam' – @MSDhoni ????pic.twitter.com/fvclSbnvGH
— DHONI Era™ ???? (@TheDhoniEra) October 10, 2022
Advertisement
ದೇಶಕ್ಕಾಗಿ ಹಲವು ಪ್ರಶಸ್ತಿಗಳನ್ನು ಗೆದ್ದು ತನ್ನದೇ ಚಾಪು ಮೂಡಿಸಿರುವ ಧೋನಿ ಅವರಿಗೆ ಸರಿಸಾಟಿಯಾಗಿ ಮತ್ತೊಬ್ಬ ನಾಯಕನಿಲ್ಲ. ಧೋನಿ ತಂಡದಲ್ಲಿ ಇದ್ದಾರೆ ಅಂದ್ರೆ ಆ ಪಂದ್ಯದ ಗೆಲವು ಟೀಂ ಇಂಡಿಯಾದ್ದೇ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ನಂಬಿದ್ದರು. ಈ ನಡುವೆ ರಾಂಚಿಯಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ (School Programme) ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ ತಮ್ಮ ಶಾಲಾ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಬಿಚ್ಚಿಟ್ಟ ಮೋಹಕತಾರೆ ರಮ್ಯಾ
Advertisement
Advertisement
ಮಾಹಿ ಹೇಳಿದ್ದೇನು?: 7ನೇ ತರಗತಿಯಿಂದ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಆಗ ನಾನು ಸರಾಸರಿ ವಿದ್ಯಾರ್ಥಿಯಾಗಿದ್ದೆ. ಕ್ರಿಕೆಟ್ (Cricket) ಆಡಲು ಪ್ರಾರಂಭಿಸಿದಾಗಿನಿಂದ ನನ್ನ ಹಾಜರಾತಿ ಕಡಿಮೆಯಾಗುತ್ತಾ ಬಂದಿತು. ಅದನ್ನು ಹೊರತುಪಡಿಸಿದ್ರೆ ನಾನು ಉತ್ತಮ ವಿದ್ಯಾರ್ಥಿಯೇ ಆಗಿದ್ದೆ. 10ನೇ ತರಗತಿಯಲ್ಲಿ ಶೇ.66 ಫಲಿತಾಂಶ ಪಡೆದಿದ್ದೇನೆ. ಪಿಯುಸಿ ನಲ್ಲಿ 57 ಪರ್ಸೆಂಟ್ ಫಲಿತಾಂಶ ಬಂದಿದೆ. ಇದನ್ನೂ ಓದಿ: ಡಿಜೆ ಹಾಕಿ ಹಿಂದೂ ವಿರೋಧಿ ಘೋಷಣೆ- ಮಚ್ಚು, ಲಾಂಗ್, ತಲ್ವಾರ್ ಬೀಸಿ ಪುಂಡಾಟ
Advertisement
ನಾನು ದಿನಪೂರ್ತಿ ಆಟವಾಡುತ್ತಿದ್ದರಿಂದ ನನ್ನ ಹಾಜರಾತಿ ತುಂಬಾನೆ ಕಡಿಮೆಯಾಗಿತ್ತು. ಇದು ಸ್ವಲ್ಪ ಕಠಿಣ ಪರಿಸ್ಥಿತಿಯಾಗಿತ್ತು. 10ನೇ ತರಗತಿ ಬೋರ್ಡ್ ಎಕ್ಸಾಮ್ಸ್ಗಳು ನಡೆಯುತ್ತಿದ್ದರೂ ಅಧ್ಯಾಯಗಳು ಹೇಗಿದ್ದವು ಎಂಬುದೇ ನನಗೆ ಗೊತ್ತಿರಲಿಲ್ಲ. ಯಾವ ಪಾಠದಿಂದ ಯಾವ ಪ್ರಶ್ನೆ ಬಂದರೆ ಏನು ಉತ್ತರ ಬರೆಯಬೇಕು? ಎಂಬುದೂ ತಿಳಿದಿರಲಿಲ್ಲ. ಇದು ಅತ್ಯಂತ ವಿಷಾದನೀಯವಾಗಿತ್ತು. ಆದ್ದರಿಂದಲೇ ನನ್ನಪ್ಪ ನೀನು ಎಸ್‌ಎಸ್‌ಎಲ್‌ಸಿ ಪಾಸ್ ಆಗೋದಿಲ್ಲ ಅಂತಾ ಭವಿಷ್ಯ ನುಡಿದುಬಿಟ್ಟಿದ್ರು. ಅದೃಷ್ಟವಶಾತ್ ನಾನು ಪಾಸ್ ಆದೆ. ಅಪ್ಪ ತುಂಬಾ ಖುಷಿ ಪಟ್ಟರು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.