ಬೆಂಗಳೂರು: ಮಹಿಳೆ ತಮ್ಮ ಪಕ್ಷದ ಕಾರ್ಯಕರ್ತೆಯಾಗಿದ್ದರು. ಆದ್ದರಿಂದ ಪರಿಚಯಸ್ಥರಾಗಿದ್ದರಿಂದ ಸಲುಗೆಯಿಂದ ತಾಳ್ಮೆ ಕಳೆದುಕೊಂಡಿದ್ದಾರೆ. ಹೀಗಾಗಿ ತಂದೆಯ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕೇಳಿದ್ದಾರೆ.
ಮೈಸೂರಿನಲ್ಲಿ ಕ್ಷೇತ್ರದ ಶಾಸಕರು ಕೈಗೆ ಸಿಗುವುದಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ದೂರು ನೀಡಿದ್ದಕ್ಕೆ ಟೇಬಲ್ ಕುಟ್ಟಿದ ಮಹಿಳೆಯ ಮೈಕ್ ಕಿತ್ತುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಯಂತೀದ್ರ ಅವರು, ನಮ್ಮ ತಂದೆ 40 ವರ್ಷದಿಂದ ರಾಜಕೀಯ ಮಾಡುತ್ತಿದ್ದಾರೆ. ಸಾಕಷ್ಟು ಸಭೆಗಳನ್ನು ಮಾಡಿದ್ದು, ಎಲ್ಲ ಕಡೆ ಅವರು ತಾಳ್ಮೆಯಿಂದ ನಡೆದುಕೊಂಡಿದ್ದಾರೆ. ಈ ಸಭೆಯಲ್ಲಿ ಪ್ರಶ್ನೆ ಕೇಳುತ್ತಿದ್ದ ಮಹಿಳೆ ಕೂಡ ನಮ್ಮ ಪಕ್ಷದವರೇ ಆಗಿದ್ದಾರೆ. ಅವರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ದೂರು ಹೇಳುತ್ತಿದ್ದರು. ಈ ವೇಳೆ ಮಹಿಳೆ ದೂರು ಹೇಳುತ್ತಾ ಹೇಳುತ್ತಾ ಗರಂ ಆಗಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಮಹಿಳೆ ನೀವು ಚುನಾವಣೆಯಾದ ಬಳಿಕ ನಮ್ಮ ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ನಾನು, ನಮ್ಮ ತಂದೆಯವರು ಕ್ಷೇತ್ರಕ್ಕೆ ಹೋಗುತ್ತಿದ್ದೇವೆ. ಆ ಮಹಿಳೆ ನಮ್ಮ ತಂದೆಗೆ 15 ವರ್ಷದಿಂದ ಪರಿಚಯ ಇತ್ತು. ಹೀಗಾಗಿ ಪರಿಚಯವಿದ್ದುದ್ದರಿಂದ ಸ್ವಲ್ಪ ತಾಳ್ಮೆ ಕಳೆದುಕೊಂಡಿದ್ದಾರೆ. ಆದರೆ ನಮ್ಮ ತಂದೆ ಅವರು ತಾಳ್ಮೆ ಕಳೆದುಕೊಳ್ಳಬಾರದಿತ್ತು. ಮಹಿಳೆ ಯಾವಾಗ ನೀವು ನಮ್ಮ ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ಸುಳ್ಳು ಹೇಳಿದರು. ಆಗ ನಮ್ಮ ಪಕ್ಷದ ಕಾರ್ಯಕರ್ತರೇ ಈ ರೀತಿ ಮಾತನಾಡಿದ್ದಾರೆ ಎಂದು ಕೋಪ ಮಾಡಿಕೊಂಡಿದ್ದಾರೆ. ಸಲುಗೆಯಿಂದ ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಚುನಾವಣೆ ಆದ ಮೇಲೆ ನಾವು ಎಲ್ಲ ಗ್ರಾಮಗಳಿಗೂ ಭೇಟಿ ಕೊಡುತ್ತಿದ್ದೇವು. ವಾರದಲ್ಲಿ 3, 4 ದಿನ ಹೋಗುತ್ತಿದ್ದೇವೆ. ನಮ್ಮ ತಂದೆಯವರು ತಾಳ್ಮೆಯಿಂದ ಮಾತನಾಡುತ್ತಿದ್ದರು. ಆದರೆ ಮಹಿಳೆ ಸುಳ್ಳು ಹೇಳಿದಾಗ ಕೋಪ ಮಾಡಿಕೊಂಡಿದ್ದಾರೆ. ನಮ್ಮ ತಂದೆ ಎಲ್ಲ ಹೆಣ್ಣು ಮಕ್ಕಳಿಗೂ ಗೌರವ ಕೊಟ್ಟು ಮಾತನಾಡುತ್ತಾರೆ. ಕೆಲವು ಬಾರಿ ತಪ್ಪುಗಳಾಗುತ್ತವೆ. ಯಾಕೆಂದರೆ ಯಾವಗಲೂ ಮನಸ್ಸು ಒಂದೇ ರೀತಿ ಇರುವುದಿಲ್ಲ. ಆದರೆ ಅಲ್ಲಿ ಅವರು ತಾಳ್ಮೆ ಕಳೆದುಕೊಳ್ಳಬಾರದಿತ್ತು. ಅದು ದುರದೃಷ್ಟಕರವಾಗಿದ್ದು, ನಮ್ಮ ತಂದೆ ಕಾರಣ ಇಲ್ಲದೇ ಆ ರೀತಿಯಾಗಿ ವರ್ತಿಸುತ್ತಿರಲಿಲ್ಲ ಎಂದರು.
Advertisement
ಮಹಿಳೆ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂದು ಸುಮಾರು 5-10 ನಿಮಿಷ ಮಾತನಾಡುತ್ತಿದ್ದರು. ನಮ್ಮ ತಂದೆ ಮೇಲೆ, ನಮ್ಮ ಮೇಲೂ ಸುಳ್ಳು ಆರೋಪ ಮಾಡಿದರು. ನಾವು ಮಹಿಳೆಗೆ ಕೆಲಸ ಮಾಡಿಕೊಡುತ್ತೇವೆ ಎಂದು ಸಮಾಧಾನ ಮಾಡುತ್ತಿದ್ದೇವು. ಆದರೂ ಅವರು ಕೇಳಲಿಲ್ಲ. ಅವರ ದೂರು ಸುಳ್ಳಾಗಿತ್ತು. ಕೊನೆಗೆ ನಮ್ಮ ತಂದೆ ತಾಳ್ಮೆ ಕಳೆದುಕೊಂಡಿದ್ದಾರೆ. ಒಂದೇ ಪಕ್ಷ ಎಂದರೂ ದೂರುಗಳು, ಅಸಮಾಧಾನ ಇರುತ್ತದೆ. ಅವರ ಕೋಪಕ್ಕೆ ಕಾರಣ ತಿಳಿದುಕೊಂಡು ನಾನು ಮಾತನಾಡುತ್ತೇನೆ. ಆ ಸಂದರ್ಭದಲ್ಲಿ ನಮ್ಮ ತಂದೆ ಅಷ್ಟು ಮಟ್ಟಕ್ಕೆ ಕೋಪ ಮಾಡಿಕೊಳ್ಳಬಾರದಿತ್ತು. ಸಮಾಧಾನವಾಗಿ ಮಹಿಳೆಗೆ ಹೇಳಬೇಕಿತ್ತು. ಆದರೆ ಇದರಿಂದ ಜನರಿಗೆ ತಪ್ಪು ಮಾಹಿತಿ ತಲುಪಬಾರದು. ಈ ಬಾರಿ ತಪ್ಪಾಗಿದೆ, ಹೀಗಾಗಿ ಅವರ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿದ್ದಾರೆ.
https://www.youtube.com/watch?v=wq3UkBdNrVo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv