ಆಪಲ್ ವಾಚ್‍ನಿಂದ ತಂದೆಯ ಜೀವ ಉಳಿಯಿತು – ಮಗನ ಪೋಸ್ಟ್

Public TV
1 Min Read
apple watch

ವಾಷಿಂಗ್ಟನ್: ಬೈಕ್ ಅಪಘಾತದ ಸಂದರ್ಭದಲ್ಲಿ ನನ್ನ ತಂದೆಯ ಜೀವ ಉಳಿಸಲು ಆಪಲ್ ವಾಚ್ ಸಹಾಯ ಮಾಡಿತು ಎಂದು ವಾಷಿಂಗ್ಟನ್‍ನ ಸ್ಪೋಕೇನ್ ನಗರದ ವ್ಯಕ್ತಿಯೊಬ್ಬರು ಆಪಲ್ ವಾಚ್‍ನನ್ನು ಹೊಗಳಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‍ನ್ನು ಅಪರಿಚಿತರೊಬ್ಬರು ಟ್ವೀಟ್ ಮಾಡಿದ್ದು, ಇದಕ್ಕೆ ಸ್ವತಃ ಆಪಲ್ ಕಂಪನಿ ಸಿಇಓ ಟಿಮ್ ಕುಕ್ ಲೈಕ್ ಕೊಟ್ಟಿದ್ದಾರೆ.

ಗೇಬ್ ಬರ್ಡೆಟ್ ತಮ್ಮ ತಂದೆ ಬಾಬ್ ಅವರಿಗಾಗಿ ರಿವರ್‍ಸೈಡ್ ಸ್ಟೇಟ್ ಪಾರ್ಕಿನಲ್ಲಿ ಮೊದಲೇ ಗೊತ್ತುಪಡಿಸಿದ ಸ್ಥಳದಲ್ಲಿ ಕಾಯುತ್ತಿದ್ದರು. ಆಗ ತಮ್ಮ ತಂದೆಯ ಆಪಲ್ ವಾಚ್‍ನಿಂದ ಟೆಕ್ಸ್ಟ್ ಮೆಸೇಜ್ ಬಂದಿದೆ. “ಜೋರಾಗಿ ಬಿದ್ದಿದೆ ಹಾಗೂ ಒಡೆದಿದೆ” ಎಂದು ಸಂದೇಶದಲ್ಲಿತ್ತು. ಇದರೊಂದಿಗೆ ಅವರ ತಂದೆ ಇರುವ ಸ್ಥಳದ ಲೊಕೇಶನ್ ಕೂಡ ವಾಚ್ ರವಾನಿಸಿತ್ತು. ನಂತರ ವಾಚ್ ಮತ್ತೊಂದು ಸಂದೇಶ ರವಾನಿಸಿದ್ದು, ಅವರ ತಂದೆ “ಸೇಕ್ರೆಡ್ ಹಾರ್ಟ್ ಮೆಡಿಕಲ್ ಸೆಂಟರ್” ಜಾಗದಲ್ಲಿದ್ದಾರೆ ಎಂದು ಸಂದೇಶದಲ್ಲಿತ್ತು. ಸಂದೇಶವನ್ನು ನೋಡಿದ ತಕ್ಷಣ ಬರ್ಡೆಟ್ ಆಸ್ಪತ್ರೆಗೆ ತೆರಳಿದ್ದಾರೆ.

apple watch 2

“ಬೈಕನ್ನು ತಿರುಗಿಸುವ ಸಂದರ್ಭದಲ್ಲಿ ತಂದೆಗೆ ತಲೆಗೆ ಹೊಡೆತ ಬಿದ್ದಿತ್ತು. ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು” ಎಂದು ಬಡೇಟ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ವಾಚ್ 911ನ್ನು ಸ್ಥಳದೊಂದಿಗೆ ತೋರಿಸಿದೆ. 30 ನಿಮಿಷಗಳಲ್ಲಿ ತುರ್ತು ವೈದ್ಯಕೀಯ ಸೇವೆ ನೀಡಿ, ನಂತರ ಗಾಯಗೊಂಡ ಬಾಬ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.

ನೀವು ಆಪಲ್ ವಾಚ್ ಹೊಂದಿದ್ದರೆ, ನೀವೂ ಸಹ ಹಾರ್ಡ್ ಫಾಲ್ ಡಿಟೆಕ್ಷನ್‍ನ್ನು ಸೆಟ್ ಮಾಡಿ. ಮೇಲ್ಛಾವಣಿಯಿಂದ ಅಥವಾ ಏಣಿಯಿಂದ ಬಿದ್ದಾಗ ಮಾತ್ರವಲ್ಲ. ತುರ್ತು ಸಂದರ್ಭದಲ್ಲಿಯೂ ಸಹಾಯವಾಗಲಿದೆ ಎಂದು ಬರ್ಡೆಟ್ ಪೋಸ್ಟ್ ಮಾಡಿದ್ದಾರೆ.

ಯಾರಾದರೂ ದೂರದ ಪ್ರದೇಶದಲ್ಲಿ ಬಿದ್ದಿದ್ದರೆ, ಅವರು ಎಲ್ಲಿದ್ದಾರೆ ಎಂದು ಕಂಡುಹಿಡಿಯಲು ಸ್ಥಳದ ವಿವರವನ್ನೂ ಸಹ ಆಪಲ್ ವಾಚ್ ನೀಡುತ್ತದೆ. ಅದ್ಭುತ ತಂತ್ರಜ್ಞಾನ ಮತ್ತು ಅವರು ಈ ವಾಚ್ ಹೊಂದಿದ್ದಕ್ಕೆ ಸಂತೋಷವಾಗಿದೆ ಎಂದು ಬರ್ಡೇಟ್ ತಿಳಿಸಿದ್ದಾರೆ. ಕೇವಲ ಈ ಪ್ರಕರಣ ಮಾತ್ರವಲ್ಲ ಹಲವಾರು ಜೀವಗಳನ್ನು ಆಪಲ್ ವಾಚ್ ಉಳಿಸಿರುವ ಉದಾಹರಣೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *