ಬೆಂಗಳೂರು: ಕಳೆದ ರಾತ್ರಿ ಮದುವೆ ಮನೆಯಲ್ಲಿ ಗಲಾಟೆ ಹಿನ್ನಲೆಯಲ್ಲಿ ಮದುವೆಗೆ ಶ್ವಾನಗಳು ಸಾಕ್ಷಿಯಾಗಿದೆ.
ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದ ವಿರಾಟ ಭವನದಲ್ಲಿ ನವ ಜೋಡಿಗಳಾದ ಕೃಷ್ಣಮೂರ್ತಿ ಹಾಗೂ ಸಂಧ್ಯಾ ಮದುವೆ ಆಗಿದ್ದರು. ಇಬ್ಬರು ಎರಡು ವರ್ಷದ ಹಿಂದೆ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ವರನ ಪೋಷಕರು ರಾತ್ರಿ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು.
ಇಂದು ವರ ಕೃಷ್ಣಮೂರ್ತಿ ತನ್ನ ಪ್ರೀತಿಯ ಶ್ವಾನಗಳನ್ನ ಮುದ್ದಾಡಿದ್ದರು. ನನ್ನ ಕುಟುಂಬ ನನ್ನ ಜೊತೆ ಪ್ರೀತಿಯಿಂದ ಸಾಕಿದ್ದ ಶ್ವಾನಗಳನ್ನ ಹೊರ ಹಾಕಿದ್ದರು. ನನ್ನ ಮದುವೆಗೆ ಈ ಎರಡು ಶ್ವಾನಗಳೇ ಸಾಕ್ಷಿ. ಮುಂದೆ ನೆಮ್ಮದಿಯ ಜೀವನ ನಡೆಸುವೆ. ಯಾವುದೇ ಆತಂಕ ಬೇಡ ಎಂದು ವರ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮದುವೆ ಮನೆಯಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುವೆಯ ಎಲ್ಲ ಕಾರ್ಯಗಳು ಶಾಸ್ತ್ರ ಸಂಪ್ರದಾಯದಂತೆ ಮುಂದುವರೆದಿದೆ. ಕಳೆದ ರಾತ್ರಿ ವರ ಹಾಗೂ ವಧು ಮನೆಯ ಕುಟುಂಬದ ನಡುವೆ ಗಲಾಟೆ ನಡೆದಿತ್ತು. ಇಂದು ಮದುವೆ ಶಾಸ್ತ್ರಗಳು ಆರಂಭವಾಗಿದೆ. ಮದುವೆಗೆ ಯಾವುದೇ ಅಡ್ಡಿಯಿಲ್ಲದೆ ಸುಖಾಂತ್ಯಗೊಂಡಿದ್ದು, ಮದುವೆ ಮನೆ ಸಡಗರ ಸಂಭ್ರಮದಿಂದ ಕೂಡಿದೆ. ಇದನ್ನೂ ಓದಿ: ಪೋಷಕರಿಗೆ ತಿಳಿಸದೇ ಪ್ರೀತಿಸಿದವಳ ಕೈಹಿಡಿದ- ನೆಲಮಂಗಲ ಮದ್ವೆ ಮನೆಯಲ್ಲಿ ಭಾರೀ ಹೈಡ್ರಾಮ