ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬಹಿರಂಗಗೊಳ್ಳುತ್ತಿವೆ. ಅದರಲ್ಲಿ ಬಹುಪಾಲು ಪ್ರೀತಿ, ಪ್ರೇಮ, ಬ್ರೇಕ್ ಅಪ್, ಕ್ರಶ್ ಕುರಿತದ್ದೇ ಆಗಿರುತ್ತವೆ. ಬಿಗ್ ಬಾಸ್ ಓಟಿಟಿ ನಡೆದ ಸಂದರ್ಭದಲ್ಲಂತೂ ದೊಡ್ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳಿಗೆ ಲವ್ ಫೆಲ್ಯುವರ್ ಆಗಿತ್ತು. ಎರಡನೇ ಸಂಬಂಧವನ್ನೂ ಇಟ್ಟುಕೊಂಡವರಿದ್ದರು. ತಮ್ಮ ಜೀವನದಲ್ಲಾದ ಘಟನೆಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಟ್ಟು ನೋಡುಗರು ಆಡಿಕೊಂಡು ನಗುವಂತೆ ಮಾಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಅದು ಮುಂದುವರೆದಿದೆ.
ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಡಿಗ್ಲಾಮ್ ಪಾತ್ರ ಮಾಡಿದ್ದ, ಅಳುಮುಂಜಿ ಹುಡುಗಿ ಎಂದೇ ಖ್ಯಾತರಾಗಿದ್ದ ಕಾವ್ಯಶ್ರೀ ಗೌಡ (Kavyashree Gowda) ತಮ್ಮ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಒಂದಲ್ಲ, ಎರಡೆರಡು ಕ್ರಶ್ ಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವಾಗ ಅವರು ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನೂ ನೆನಪಿಸಿಕೊಂಡಿದ್ದಾರೆ. ಎರಡು ಕ್ರಶ್ ಗಳಲ್ಲಿ ಒಂದಕ್ಕೆ ಯಶ್ ಸ್ಪೂರ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ
ಇವರಿಗೆ ಪ್ರಪ್ರಥಮ ಬಾರಿಗೆ ಕ್ರಶ್ (Crush) ಆಗಿದ್ದು ಅಜ್ಜಿ ಊರಿಗೆ ಜಾತ್ರೆಗೆ ಹೋದಾಗಂತೆ. ಅಜ್ಜಿ ಊರಿಗೆ ಜಾತ್ರೆಗೆಂದು ಹೋಗಿದ್ದೆ. ಅಲ್ಲೊಂದು ಗುಂಪಿತ್ತು. ಆ ಗುಂಪಿನಲ್ಲಿದ್ದ ಒಬ್ಬ ಹುಡುಗ ಥೇಟ್ ಯಶ್ ತರಹವೇ ಇದ್ದ. ಹಾಗಾಗಿ ಅವನ ಮೇಲೆ ಮೊದಲ ಬಾರಿಗೆ ಕ್ರಶ್ ಆಯಿತು. ಆ ಹುಡುಗರ ಗುಂಪು ನನ್ನನ್ನೇ ಫಾಲೋ ಮಾಡುತ್ತಿತ್ತು. ತೀರಾ ಹತ್ತಿರ ಬರೋಕೆ ಶುರುವಾಯಿತು. ನನಗೆ ಭಯನೋ ಭಯ. ಯಶ್ ರೀತಿಯಲ್ಲೇ ಕಾಣುತ್ತಿದ್ದ ಆ ಹುಡುಗ ತೀರಾ ಸಮೀಪಕ್ಕೆ ಬಂದು ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತನ್ನ ಫೋನ್ ನಂಬರ್ ಇರುವ ಚೀಟಿ ಹಾಕಿದ್ದ ಎಂದು ನೆನಪಿಸಿಕೊಂಡಿದ್ದಾರೆ ಕಾವ್ಯಶ್ರೀ ಗೌಡ.
ಮತ್ತೊಮ್ಮೆ ಕ್ರಶ್ ಆಗಿದ್ದು ಕೂಡ ದೇವಸ್ಥಾನದಲ್ಲೇ ಎಂದಿದ್ದಾರೆ ನಟಿ. ಇವರು ತಿರುಪತಿ ಬೆಟ್ಟ ಹತ್ತುವಾಗ ಇವರನ್ನೇ ಫಾಲೋ ಮಾಡುತ್ತಿದ್ದ ಹುಡುಗನ ಮೇಲೆ ಕ್ರಶ್ ಆಗಿತ್ತಂತೆ. ‘ನಾನು ಮತ್ತು ನನ್ನ ತಾಯಿ ತಿರುಪತಿ ಬೆಟ್ಟ ಏರುತ್ತಿದ್ದವು. ಆ ಹುಡುಗ, ನಮ್ಮನ್ನೇ ಫಾಲೋ ಮಾಡಿಕೊಂಡು ಬರುತ್ತಿದ್ದ. ಬೆಟ್ಟ ಹತ್ತುವಾಗ ನಮಗಿಂತ ಮುಂಚೆ ಇರುತ್ತಿದ್ದ, ನಂತರ ಮತ್ತೆ ಹಿಂದುಳಿಯುತ್ತಿದ್ದ. ಅವನು ಯಾಕೆ ಹಾಗೆ ಮಾಡುತ್ತಿದ್ದಾನೆ ಎನ್ನುವುದು ಅರ್ಥವಾಗುವ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಅವನು ಲಡ್ಡು ಇಟ್ಟುಬಿಟ್ಟಿದ್ದ. ಜೊತೆಗೆ ಫೋನ್ ನಂಬರ್ ಇರುವ ಚೀಟಿನೂ ಇತ್ತು’ ಎಂದು ಎರಡನೇ ಕ್ರಶ್ ಬಗ್ಗೆ ನೆನಪಿಸಿಕೊಂಡಿದ್ದಾರೆ.