ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧ. ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ರೆಡಿ ಎಂದರು. ಇದನ್ನೂ ಓದಿ: ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್
Advertisement
ಉಸ್ತುವಾರಿ ಸಭೆಗೆ ನಾನು ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲ ಇದೆ, ಅಲ್ಲಿ ನಮಗೇನು ಕೆಲಸ. 600 ಶಾಸಕರು, 1,500 ಸಂಸದರು, 2,000 ಎಂಎಲ್‌ಸಿಗಳ ಬೆಂಬಲ ಇದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕಳೆದ 1 ತಿಂಗಳಿಂದ ಸಿಕ್ತಿಲ್ಲ ಹೊಸ ಡಿಎಲ್, ಆರ್‌ಸಿ ಸ್ಮಾರ್ಟ್ ಕಾರ್ಡ್; 15 ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ: ರಾಮಲಿಂಗಾರೆಡ್ಡಿ
Advertisement
Advertisement
ಯತ್ನಾಳ್, ಜಾರಕಿಹೊಳಿ ಹಿಂದೆ ಯಾವ ಮಗಾ ಇದ್ದಾನೆ? ಅದಕ್ಕೆ ನಾವು ಹೋಗಿಲ್ಲ. ಕಾರ್ಯಕರ್ತರ ಹುರುಪು ಆಗುವಂತೆ ಅಧ್ಯಕ್ಷರಾಗಬೇಕು. ರಾತ್ರಿ ಡಿಕೆಶಿ ಮನೆಯಲ್ಲಿ, ಮುಂಜಾನೆ ಸಿದ್ದರಾಮಯ್ಯ ಮನೆ. ಮತ್ತೆ ಬೆಳಗ್ಗೆ 11ಕ್ಕೆ ಬೋಲೋ ಭಾರತ್ ಮಾತಾ ಕೀ ಜೈ ಎಂದರೆ ಹೇಗೆ? ಎಂದು ಪರೋಕ್ಷವಾಗಿ ವಿಜಯೇಂದ್ರರನ್ನು ಕುಟುಕಿದರು. ಇದನ್ನೂ ಓದಿ: Kolar| ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ
Advertisement