ಇಸ್ಲಾಮಾಬಾದ್/ಟೆಹ್ರಾನ್: ಇಸ್ಲಾಮಾದ್ನಲ್ಲಿ (Islamabad) ನಡೆಯುತ್ತಿರುವ ಸಂಧಾನ ಸಭೆಗೆ ಇರಾನ್ ನಿಯೋಗ ರಕ್ತಸಿಕ್ತ ಶಾಲಾ ಬ್ಯಾಗ್ಗಳು (Blood Soaked School Bags), ಬೂಟುಗಳು, ಬಿಳಿ ಹೂವುಗಳು ಮತ್ತು ಬಾಂಬ್ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಚಿತ್ರಗಳೊಂದಿಗೆ ಬಂದಿದೆ.
همراهان من در این پرواز#Minab168 pic.twitter.com/xvXmDlSDiF
— محمدباقر قالیباف | MB Ghalibaf (@mb_ghalibaf) April 10, 2026
ಫೆಬ್ರುವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಜಂಟಿ ದಾಳಿ (US Israel Iran Strike) ನಡೆಸಿ ಸರ್ವೋಚ್ಛ ನಾಯಕ ಅಯಾತೊಲ್ಲಾ ಖಮೇನಿಯನ್ನ ಕೊಂದ ಸಂದರ್ಭದಲ್ಲೇ ಮಿನಾಬ್ ಪ್ರದೇಶದಲ್ಲಿ ಬಾಲಕಿಯರ ಶಾಲೆ ಮೇಲೆ ಬಾಂಬ್ ದಾಳಿ ನಡೆದಿತ್ತು. ಈ ವಿಧ್ವಸಂಕ ಕೃತ್ಯದಲ್ಲಿ 168 ಮಕ್ಕಳು ಅಸುನೀಗಿದ್ರು. ಇದನ್ನೂ ಓದಿ: ಇಸ್ಲಾಮಾಬಾದ್ಗೆ ಆಗಮಿಸಿದ ಅಮೆರಿಕ ಉಪಾಧ್ಯಕ್ಷರ ಫ್ಲೈಟ್ಗೆ ಪಾಕ್ನ ಎಫ್-16 ಜೆಟ್ಗಳ ಬೆಂಗಾವಲು
ಈಗ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ವಿರಾಮ ಏರ್ಪಟ್ಟಿದ್ದು, ಶಾಶ್ವತವಾಗಿ ಯುದ್ಧ ಶಮನಕ್ಕೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದೆ. ಈ ಸಂದರ್ಭ ಶಾಲೆ ಮೇಲೆ ದಾಳಿ ನಡೆಸಿದ ಅಮೆರಿಕದ ಕರುಣಾಹೀನ ಕೃತ್ಯದ ಬಗ್ಗೆ ಗಮನ ಸೆಳೆಯಲು ಇರಾನ್ ಮುಂದಾಗಿದೆ. ಇದನ್ನೂ ಓದಿ: ಇರಾನ್ಗೆ ನೂತನ ಏರ್ ಡಿಫೆನ್ಸ್ ಸಿಸ್ಟಮ್ ಪೂರೈಕೆಗೆ ಚೀನಾ ಸಿದ್ಧತೆ – ಅಮೆರಿಕ ಕಳವಳ

ಇದಕ್ಕಾಹಿ ಸ್ಪೀಕರ್ ಮೊಹಮ್ಮದ್ ಬಾಖರ್ ಖಾಲೀಬಾಫ್ ನೇತೃತ್ವದ ಇರಾನಿನ ನಿಯೋಗ ಮೃತಪಟ್ಟ ಮಕ್ಕಳ ಶೂ, ರಕ್ತಸಿಕ್ತ ಶಾಲಾ ಬ್ಯಾಗ್ ಮತ್ತು ಅವರ ಫೋಟೋಗಳೊಂದಿಗೆ ಬಂದಿದೆ. ಇದನ್ನೂ ಓದಿ: ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ಪಾಕ್ಗೆ ಬಂದಿಳಿದ ಇರಾನ್ ನಿಯೋಗ
ವಿಮಾನದ ಸೀಟ್ಗಳಲ್ಲಿ ಮೃತಪಟ್ಟ ಮಕ್ಕಳ ಶೂ, ಬ್ಯಾಗ್ಗಳು ಮತ್ತು ಹೂವುಗಳನ್ನು ಇಟ್ಟು ಅದರ ಜೊತೆಗೆ ಅವರ ಚಿತ್ರಗಳನ್ನು ಇರಿಸಿರುವ ಫೋಟೋವನ್ನ ಸ್ಪೀಕರ್ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿ ಸಹ ಈ ಚಿತ್ರವನ್ನು ಹಂಚಿಕೊಂಡಿದ್ದು, ‘ನಾವು ಮಿನಾಬ್ನ ಮಕ್ಕಳನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಬರೆದುಕೊಂಡಿದೆ.

