ನವದೆಹಲಿ: ನನ್ನ ಕೋಚ್ (ತರಬೇತುದಾರ) ನಿಂದಲೇ ನನಗೆ ನಿರಂತರ ಕಿರುಕುಳ ಆಗುತ್ತಿದ್ದು, ಇದರಿಂದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಡ್ಡಿಯಾಗುತ್ತಿದೆ ಎಂದು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಗಂಭೀರ ಆರೋಪ ಮಾಡಿದ್ದಾರೆ.
https://twitter.com/LovlinaBorgohai/status/1551520397832720385?ref_src=twsrc%5Etfw%7Ctwcamp%5Etweetembed%7Ctwterm%5E1551520397832720385%7Ctwgr%5E%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbreaking-news-i-am-being-harassed-a-lot-olympic-medallist-lovlina-borgohain-accuses-coach%2F
ಲೊವ್ಲಿನಾ ತಮ್ಮ ಕೋಚ್‌ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು, ನಿಜವಾಗಿ ನನಗೆ ಸಾಕಷ್ಟು ಕಿರುಕುಳ ಆಗುತ್ತಿದೆ ಎಂದು ಬಹಳ ದುಃಖದಿಂದ ಹೇಳುತ್ತಿದ್ದೇನೆ. ಒಲಿಂಪಿಕ್ಸ್ನಲ್ಲಿ ಪದಕಗಳನ್ನ ಪಡೆಯಲೂ ನನಗೆ ಸಹಾಯ ಮಾಡಿದ ನನ್ನ ತರಬೇತುದಾರರು ಪ್ರತಿ ಬಾರಿಯೂ ನನ್ನ ತರಬೇತಿ ಪ್ರಕ್ರಿಯೆ ವೇಳೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ
We have urged the Indian Olympic Association to immediately arrange for the accreditation of the coach of Lovlina Borgohain. https://t.co/6GhD72cvY4
— Dept of Sports MYAS (@IndiaSports) July 25, 2022
ನಾನಿಂದು ಬಹಳಷ್ಟು ದುಃಖದಿಂದ ನನ್ನ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಎಲ್ಲರಿಗೂ ಹೇಳಲು ಬಯಸುತ್ತೇನೆ. ನಮ್ಮ ತರಬೇತುದಾರರಲ್ಲಿ ಒಬ್ಬರಾದ ಸಂಧ್ಯಾ ಗುರುಂಗ್ಜಿ ದ್ರೋಣಾಚಾರ್ಯ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವರಿಗೆ ಕೈ ಮುಗಿದು ಮನವಿ ಮಾಡಬೇಕಾಯಿತು. ಈ ಅಗ್ನಿ ಪರೀಕ್ಷೆಯಿಂದಾಗಿ ನಾನು ಮಾನಸಿಕವಾಗಿ ಕಿರುಕುಳ ಅನುಭವಿಸಿದ್ದೇನೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಕೂಡಲೇ ಸ್ಪಂದಿಸಿರುವ ಕ್ರೀಡಾ ಸಚಿವಾಲಯವು ಪರಿಸ್ಥಿತಿಯನ್ನು ಗಮನಿಸಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಲೊವ್ಲಿನಾ ಅವರ ಕೋಚ್‌ಗೆ ಮಾನ್ಯತೆ ನೀಡಲು ತಕ್ಷಣವೇ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!
ಯಾರಿದು ಲೊವ್ಲಿನಾ?
ಭಾರತೀಯ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ 2018ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2019ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸಾಕಷ್ಟು ಭಾರತದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ. ಬಾಕ್ಸರ್ ವಿಜೇಂದರ್ ಕುಮಾರ್ (2008) ಮತ್ತು ಎಂ.ಸಿ.ಮೇರಿ ಕೋಮ್ (2012) ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ 3ನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆಯನ್ನೂ ಹೊಂದಿದ್ದಾರೆ.