ಬೆಂಗಳೂರು: ನನ್ನ ಶತ್ರುಗಳು ಎಂದರೆ ಅದು ನನ್ನ ಚಿಕ್ಕಮ್ಮ, ರಾಕೇಶ್ ಮಲ್ಲಿ ಎಂದು ಪೊಲೀಸರ ಮುಂದೆ ರಿಕ್ಕಿ ರೈ (Ricky Rai) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುತ್ತಪ್ಪ ರೈ (Mutahhap Rai) ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಸಂಬಂಧ ಪೊಲೀಸರು ರಿಕ್ಕಿ ರೈ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ನನಗೆ ಶತ್ರುಗಳು ಅಂತಾ ಇರೋದು ಚಿಕ್ಕಮ್ಮ ಅನುರಾಧ ಮತ್ತು ರಾಕೇಶ್ ಮಲ್ಲಿ ಮಾತ್ರ. ಅವರಿಬ್ಬರು ಆಸ್ತಿ ವಿಚಾರದಲ್ಲಿ ಒಂದಾಗಿದ್ದಾರೆ. ಇದು ಬಿಟ್ಟರೆ ನಿತೀಶ್ ಕಂಪನಿ ವಿಚಾರದಲ್ಲಿ ಒಂದಷ್ಟು ಮನಸ್ತಾಪವಿದೆ ಎಂದು ತಿಳಿಸಿದ್ದಾರೆ.
ಇವರನ್ನ ಹೊರತುಪಡಿಸಿ ಬೇರೆ ಯಾರ ಮೇಲೂ ಅನುಮಾನವಿಲ್ಲ ಅಂತಾ ಡಿವೈಎಸ್‌ಪಿ ಶ್ರೀನಿವಾಸ್ ಮುಂದೆ ರಿಕ್ಕಿ ಹೇಳಿಕೆ ನೀಡಿದ್ದಾನೆ. ಘಟನೆ ದಿನ ಯಾವ ಕಡೆಯಿಂದ ಫೈರಿಂಗ್ ಮಾಡಿದ್ರು ಅಂತಾ ಗೊತ್ತಾಗಲಿಲ್ಲ. ಫೈರಿಂಗ್ ಶಬ್ಧ ಕೇಳಿದೊಡನೆ ನನ್ನ ಮೂಗು ಮತ್ತು ತೋಳಿನಲ್ಲಿ ರಕ್ತ ಬರುತ್ತಿತ್ತು. ನಾನು ನೋವಿನಿಂದ ನರಳುತ್ತಿದ್ದೆ.
ಗಾಬರಿ ಮತ್ತು ನೋವಿನಲ್ಲಿ ನಾನು ಏನನ್ನೂ ಗಮನಿಸಿಲ್ಲ ಅಂತಾ ಡಿವೈಎಸ್‌ಪಿ ಮುಂದೆ ರಿಕ್ಕಿ ಹೇಳಿಕೆ ನೀಡಿದ್ದಾರೆ.