ನವದೆಹಲಿ: ಲೋಕಸಭಾ ಚುನಾವಣೆ (Loksabha Election 2024) ಕಾವು ದೇಶದಲ್ಲಿ ದಿನದಿನಕ್ಕೆ ಹೆಚ್ಚಾಗ್ತಿದೆ. ಅಮೇಥಿಯಲ್ಲಿ ಮಂಗಳವಾರವೂ ಯಾತ್ರೆ ನಡೆಸಿದ್ದ ರಾಹುಲ್ ಗಾಂಧಿ, ರಾತ್ರಿಹೊತ್ತು ಮದ್ಯ ಸೇವಿಸುವವರಿಂದ ಉತ್ತರಪ್ರದೇಶ ಭವಿಷ್ಯ ನರ್ತನ ಮಾಡ್ತಿದೆ ಅಂತಾ ವಿಮರ್ಶೆ ಮಾಡಿದ್ರು. ಅಷ್ಟೇ ಅಲ್ಲ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಾಡಹಗಲೇ ಕುಡಿದುಬಿದ್ದಿದ್ದ ವ್ಯಕ್ತಿಗಳನ್ನು ಕಂಡೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಕೌಂಟರ್ ನೀಡಿದ್ದಾರೆ.
Advertisement
ರಾಹುಲ್ (Rahul Gandhi) ಮಾತು ಕೇಳಿದ್ರೆ ಅವರ ಮನಸ್ಸಲ್ಲಿ ಎಷ್ಟು ವಿಷ ತುಂಬಿಕೊಂಡಿದೆ ಎನ್ನುವುದು ಗೊತ್ತಾಗ್ತಿದೆ. ತಮ್ಮ ಮಗನನ್ನು ಚೆನ್ನಾಗಿ ಬೆಳೆಸಲಾಗದಿದ್ರೆ ಹೋಯ್ತು.. ಕನಿಷ್ಠ ಹುಚ್ಚು ಹುಚ್ಚಾಗಿ ಮಾತಾಡದಂತೆ ನೋಡಿಕೊಳ್ಳಲಿ ಎಂದು ಸೋನಿಯಾ ಗಾಂಧಿಗೆ ಸ್ಮೃತಿ ಇರಾನಿ ಸಲಹೆ ನೀಡಿದ್ರು. ರಾಹುಲ್ ತಮ್ಮ ಮಾತಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಖಾತೆಗಳಿಂದ 65 ಕೋಟಿ ರೂ. ಕಡಿತಗೊಳಿಸಿದೆ – IT ವಿರುದ್ಧ ಗಂಭೀರ ಆರೋಪ
Advertisement
Advertisement
ಈ ಮಧ್ಯೆ ಎಂಪಿ ಎಲೆಕ್ಷನ್ ಹೇಗೆ ನಡೆಯುತ್ತದೆ ಎಂಬುದಕ್ಕೆ ಚಂಡೀಗಢ ಮೇಯರ್ ಚುನಾವಣೆಯೇ ಉದಾಹರಣೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಎಸಗಲು ಬಿಜೆಪಿ ಸಜ್ಜಾಗಿದೆ ಎಂದು ಪರೋಕ್ಷವಾಗಿ ಆಪಾದನೆ ಮಾಡಿದ್ರು. I.N.D.I.A ಕೂಟದ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಲು ರಾಹುಲ್ ಗಾಂಧಿ 5 ದಿನ ನ್ಯಾಯಯಾತ್ರೆಯನ್ನು ಸ್ಥಗಿತ ಮಾಡಲಿದ್ದಾರೆ. ಈ ಐದು ದಿನದಲ್ಲಿ 2 ದಿನಗಳನ್ನು ಇಂಗ್ಲೆಂಡ್‍ನ ಕೇಂಬ್ರಿಡ್ಜ್ ವಿವಿಯಲ್ಲಿ ಉಪನ್ಯಾಸ ನೀಡೋದಕ್ಕೆ ರಾಹುಲ್ ಗಾಂಧಿ ಮೀಸಲಿಟ್ಟಿದ್ದಾರೆ ಎನ್ನುವುದು ವಿಶೇಷ.