Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PublicTV Explainer: 50 ದಿನ ಟ್ರಿಪ್‌, 27 ನದಿ ಮಾರ್ಗವಾಗಿ ಯಾನ, 5 ಸ್ಟಾರ್‌ ಹೋಟೆಲ್‌ ಸಿಸ್ಟಮ್‌ – ʼಎಂವಿ ಗಂಗಾ ವಿಲಾಸ್‌ʼ ವೈಶಿಷ್ಟ್ಯ ಗೊತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Explainer | PublicTV Explainer: 50 ದಿನ ಟ್ರಿಪ್‌, 27 ನದಿ ಮಾರ್ಗವಾಗಿ ಯಾನ, 5 ಸ್ಟಾರ್‌ ಹೋಟೆಲ್‌ ಸಿಸ್ಟಮ್‌ – ʼಎಂವಿ ಗಂಗಾ ವಿಲಾಸ್‌ʼ ವೈಶಿಷ್ಟ್ಯ ಗೊತ್ತಾ?

Explainer

PublicTV Explainer: 50 ದಿನ ಟ್ರಿಪ್‌, 27 ನದಿ ಮಾರ್ಗವಾಗಿ ಯಾನ, 5 ಸ್ಟಾರ್‌ ಹೋಟೆಲ್‌ ಸಿಸ್ಟಮ್‌ – ʼಎಂವಿ ಗಂಗಾ ವಿಲಾಸ್‌ʼ ವೈಶಿಷ್ಟ್ಯ ಗೊತ್ತಾ?

Public TV
Last updated: February 18, 2023 4:47 pm
Public TV
Share
3 Min Read
MV ganga vilas
SHARE

ನದಿ ಮಾರ್ಗದ ಪ್ರವಾಸೋದ್ಯಮಕ್ಕೆ ಹೊಸ ದಿಸೆ ನೀಡಲು ಭಾರತ ಸಜ್ಜಾಗಿದೆ. ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರ ನೌಕೆ ʼಎಂವಿ ಗಂಗಾ ವಿಲಾಸ್‌ʼಗೆ (MV Ganga Vilas) ಇದೇ ಜ.13 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಲಿದ್ದಾರೆ. ದೇಶದ ಮೊದಲ ಪ್ರವಾಸಿ ನೌಕೆ ಇದಾಗಿದ್ದು, ನದಿ ಮಾರ್ಗದ ಪ್ರವಾಸವನ್ನು ಎಂಜಾಯ್‌ ಮಾಡಲು ದೇಶವಿದೇಶ ಪ್ರವಾಸಿಗರು ಕಾತರರಾಗಿದ್ದಾರೆ.

ʼಎಂವಿ ಗಂಗಾ ವಿಲಾಸ್‌ʼ ಐಷರಾಮಿ ಪ್ರವಾಸಿ ನೌಕೆ. 62.5 ಮೀಟರ್‌ ಉದ್ದ ಮತ್ತು 12.8 ಮೀಟರ್‌ ಅಗಲ ಇರುವ ಈ ನೌಕೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ನೌಕೆಯಲ್ಲಿರುವ ಸೌಲಭ್ಯಗಳು ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ. ನದಿ ಮಾರ್ಗದ ಪ್ರವಾಸ ಕೈಗೊಳ್ಳುವವರಿಗೆ ಇದರಿಂದ ವಿಶೇಷ ಅನುಭವ, ಅನುಭೂತಿ ಸಿಗುವುದಂತು ಗ್ಯಾರಂಟಿ. ಇದನ್ನೂ ಓದಿ: ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ – ಗಣರಾಜೋತ್ಸವದ ಪರೇಡ್‌ನಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಮಿತಿಯ ಅನುಮತಿ

ganga vilas

ಈ ಐಷರಾಮಿ ಪ್ರವಾಸಿ ನೌಕೆಯ ವೈಶಿಷ್ಟ್ಯತೆ ಏನು? ಏನೇನು ಸೌಲಭ್ಯಗಳಿವೆ? ಯಾವ್ಯಾವ ತಾಣಗಳಿಗೆ ಪ್ರವಾಸ ಕೈಗೊಳ್ಳಬಹುದು? ಟಿಕೆಟ್‌ ದರ ಎಷ್ಟು? ಪ್ರವಾಸಕ್ಕೆ ಬುಕ್‌ ಮಾಡೋದು ಹೇಗೆ.. ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಏನಿದು ಎಂವಿ ಗಂಗಾ ವಿಲಾಸ್‌?
ಇದೊಂದು ಐಷರಾಮಿ ಪ್ರವಾಸಿ ನೌಕೆ. ಪಂಚತಾರಾ ಹೋಟೆಲ್‌ ಮಾದರಿ ವ್ಯವಸ್ಥೆಯನ್ನು ನೌಕೆ ಹೊಂದಿದೆ. ನೌಕೆಯಲ್ಲಿ 3 ಅಂತಸ್ತುಗಳಿವೆ. ಪ್ರವಾಸಿಗರು ಆರಾಮಾಗಿ, ಎಂಜಾಯ್‌ ಮಾಡುತ್ತಾ ನದಿ ಮಾರ್ಗವಾಗಿ ಪ್ರವಾಸ ಕೈಗೊಳ್ಳಬಹುದು.

ganga vilas1

ಏನಿದರ ವೈಶಿಷ್ಟ್ಯ?
ಈ ನೌಕೆಯು 62.5 ಮೀಟರ್‌ ಉದ್ದ ಮತ್ತು 12.8 ಮೀಟರ್‌ ಅಗಲ ಇದೆ. ಪ್ರವಾಸಿಗರು ಕೊಠಡಿಯಿಂದಲೂ ಹೊರಗಿನ ದೃಶ್ಯಗಳನ್ನು ನೋಡಬಹುದು. ಇದರಲ್ಲಿ 40 ಆಸನಗಳ ರೆಸ್ಟೋರೆಂಟ್‌, ಸ್ಪಾ ಕೊಠಡಿ ಕೂಡ ಇದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಒಟ್ಟು 18 ಸೂಟ್‌ ರೂಮ್‌ಗಳನ್ನು ನೌಕೆ ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಓಪನ್‌ ಬಾಲ್ಕನಿ ಕೂಡ ಇದೆ. ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಈ ನೌಕೆಯಲ್ಲಿ ಜಿಮ್‌ ಹಾಗೂ ಇತ್ಯಾದಿ ವ್ಯವಸ್ಥೆ ಇದೆ. ಒಮ್ಮೆಗೆ 32 ಪ್ರವಾಸಿಗರಿಗೆ ಅವಕಾಶ ಸಿಗಲಿದೆ. ಇದನ್ನೂ ಓದಿ: ಪರೀಕ್ಷಾ ಪೆ ಚರ್ಚಾ ಸಂವಾದ- ಪೂರಕ ವಿಚಾರ, ಒಳನೋಟಗಳನ್ನು ಆಹ್ವಾನಿಸಿದ ಪ್ರಧಾನಿ

ಭಾರತ-ಬಾಂಗ್ಲಾದೇಶದ 27 ನದಿಗಳಲ್ಲಿ ಯಾನ
ಎಂವಿ ಗಂಗಾ ವಿಲಾಸ್‌ 3,200 ಕಿಮೀ ಯಾನ ಮಾಡಲಿದೆ. ನೌಕೆಯು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆ ಮಾರ್ಗವಾಗಿ ಸಾಗಲಿದೆ. ಆ ಮೂಲಕ ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಯಾಣವನ್ನು ಸ್ಮರಣೀಯ ಆಗಲಿಸಲಿದೆ. ಬಿಹಾರದ ಪಟ್ನಾ, ಜಾರ್ಖಂಡ್‌ನ ಶಿವಗಂಜ್‌, ಪಶ್ಚಿಮ ಬಂಗಾಳದ ಕೋಲ್ಕತ್ತ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ನಗರಗಳೂ ಈ ವಿಹಾರದ ಹಾದಿಯಲ್ಲಿವೆ.

ganga vilas3

ಬಿಹಾರದ ಬೌದ್ಧ ಯಾತ್ರಾ ಸ್ಥಳ ಸಾರನಾಥ, ಪ.ಬಂಗಳಾದ ಸುಂದರಬನ್‌, ಅಸ್ಸಾಂನ ಮಯೊಂಗ್‌ ಮತ್ತು ಮಜೌಲಿ, ಹುಲಿಗಳ ಆವಾಸಸ್ಥಾನವಾಗಿರುವ ಸುಂದರ್‌ಬನ್‌ನಲ್ಲಿಯೂ ನೌಕೆ ನಿಲುಗಡೆ ಇರುತ್ತದೆ. ಇದನ್ನೂ ಓದಿ: ಉಜ್ಬೇಕಿಸ್ತಾನದಲ್ಲಿ ಭಾರತದ ಕೆಮ್ಮಿನ ಸಿರಪ್‌ ಬಳಸಬೇಡಿ: WHO

NARENDRA MODI 7

ಜ.13ಕ್ಕೆ ಪ್ರಧಾನಿ ಮೋದಿ ಚಾಲನೆ
ಇದೇ ಜ.13ರಂದು ಐಷರಾಮಿ ನೌಕೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಆಗ ಉತ್ತರ ಪ್ರದೇಶದ ವಾರಣಾಸಿಯಿಂದ ಆರಂಭಗೊಳ್ಳುವ ಯಾತ್ರೆ 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ. ಹಾದಿಯುದ್ದಕ್ಕೂ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. ಎಂವಿ ಗಂಗಾದ ಮೊದಲ ಯಾತ್ರೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ 32 ಪ್ರವಾಸಿಗರು ಭಾಗವಹಿಸಲಿದ್ದಾರೆ. ಯಾತ್ರೆಯು ಮೇ 1ರಂದು ಪೂರ್ಣಗೊಳ್ಳಲಿದೆ.

ಟಿಕೆಟ್‌ ದರ ಎಷ್ಟು, ಬುಕ್‌ ಮಾಡೋದು ಎಲ್ಲಿ?
ಈ ಐಷರಾಮಿ ಪ್ರವಾಸಿ ನೌಕೆಯಲ್ಲಿ ಪ್ರಯಾಣ ಮಾಡಲು ಪ್ರತಿ ವ್ಯಕ್ತಿಗೆ ದಿನಕ್ಕೆ ಸುಮಾರು 24,692.25 ರೂ. (300 ಡಾಲರ್) ವೆಚ್ಚ ಆಗಲಿದೆ. ಟಿಕೆಟ್‌ಗಳನ್ನು ಅಂತರಾ ಐಷಾರಾಮಿ ರಿವರ್ ಕ್ರೂಸಸ್‌ನ ವೆಬ್‌ಸೈಟ್‌ನಲ್ಲಿ ಬುಕ್‌ ಮಾಡಬಹುದು. ಪ್ರವಾಸಿಗರು ಎಂವಿ ಗಂಗಾ ವಿಲಾಸ್‌ನಲ್ಲಿ ಸಂಪೂರ್ಣ 51 ದಿನಗಳವರೆಗೆ ಪ್ರವಾಸ ಕೈಗೊಳ್ಳುವುದಾದರೆ, ಒಬ್ಬರಿಗೆ ಸುಮಾರು 12.59 ಲಕ್ಷ (15,3000 ಡಾಲರ್) ಟಿಕೆಟ್‌ ದರ ಭರಿಸಬೇಕು. ಭಾರತೀಯ ಮತ್ತು ವಿದೇಶಿಯರಿಗೆ ಟಿಕೆಟ್ ದರ ಒಂದೇ ಆಗಿರುತ್ತದೆ. ಇದನ್ನೂ ಓದಿ: ಮತ್ತೆ ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:Ganga CruiseMV Ganga Vilasnarendra modiworld's longest river cruiseಎಂವಿ ಗಂಗಾ ವಿಲಾಸ್‌ನರೇಂದ್ರ ಮೋದಿಪ್ರವಾಸಿ ನೌಕೆ
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

LPG
Bengaluru City

ಬೆಂಗಳೂರಲ್ಲಿ LPG ದಾಸ್ತಾನು ಕೊರತೆ ಇಲ್ಲ: ಡಿಸಿ ಸ್ಪಷ್ಟನೆ

Public TV
By Public TV
10 minutes ago
HDK 1
Bengaluru City

ಹೆಚ್‌ಡಿಕೆ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಫ್‌ಐಆರ್‌ – ಸಮಸ್ಯೆ ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರ ನೇಮಕಕ್ಕೆ ಹೈಕೋರ್ಟ್‌ ಸೂಚನೆ

Public TV
By Public TV
15 minutes ago
Parappana Agrahara Jail
Belgaum

ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ

Public TV
By Public TV
23 minutes ago
Byrati Basavaraj
Bengaluru City

ಬಿಕ್ಲು ಶಿವ ಕೊಲೆ ಕೇಸ್ – ಬೈರತಿ ಬಸವರಾಜ್‌ಗೆ ಜಾಮೀನು

Public TV
By Public TV
53 minutes ago
Hardeep Singh Puri
Latest

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಿಲ್ಲ: ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಸ್ಪಷ್ಟನೆ

Public TV
By Public TV
1 hour ago
Rahul Gandhi vd savarkar
Court

ಸಾವರ್ಕರ್ ಕುರಿತು ಹೇಳಿಕೆ – ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?