ವಿಜಯಪುರ: ಕಾಲಕಾಲಕ್ಕೆ ಸಮಾಜ ಸ್ವಚ್ಛಗೊಳಿಸುವ ಕೆಲಸ ಆಗಬೇಕು. ಹಾಗಾಗಿ, ಮಠಗಳು, ರಾಜಕೀಯ ಪಕ್ಷಗಳು (Political Parties) ಭೇದ-ಭಾವ ಮಾಡೋದನ್ನು ನಿಲ್ಲಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (VishwaPrasanna Tirtha Swamiji) ಕರೆ ನೀಡಿದ್ದಾರೆ.
ನಗರಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಲಕಾಲಕ್ಕೆ ಸಮಾಜವನ್ನು ಸ್ವಚ್ಛಗೊಳಿಸಬೇಕು. ಮಠ, ರಾಜಕೀಯ ಪಕ್ಷಗಳು ಬೇಧ – ಭಾವ ಮಾಡಬಾರದು. ಸಂಬಂಧಗಳಲ್ಲಿ ದ್ರೋಹ ಬಗೆಯುವ ಕೆಲಸ ಆಗಬಾರದು. ನಾವು ಸರಿಯಾಗಿ ಇದ್ರೇ ಎಲ್ಲವೂ ಸರಿಯಾಗಿ ಇರುತ್ತೆ. ದೈವ ಭಕ್ತಿ, ದೇಶ ಭಕ್ತಿ ಒಂದೇ. ಶ್ರೀರಾಮನ ಹೆಸರಿನಲ್ಲಿ ಸೇವೆ ಮಾಡೋಣ, ಅದಕ್ಕಾಗಿ `ರಾಮನ (Lord Rama) ಸೇವೆಯೇ ದೇಶಸೇವೆ ಅನ್ನೋ ಅಭಿಯಾನ ಹಮ್ಮಿಕೊಳ್ಳೋಣ. ಮುಂದಿನ ರಾಮನವಮಿ ಒಳಗಾಗಿ ಈ ಅಭಿಯಾನ ಹಮ್ಮಿಕೊಳ್ಳಲು ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (RamMandir) ನಿರ್ಮಾಣ ಮಾಡುವುದು ಒಂದು ಕನಸು ಆಗಿತ್ತು. ಆದರೀಗ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಆಗಬಾರದು. ಬದಲಿಗೆ ರಾಮರಾಜ್ಯ ಕನಸು ನನಸು ಆಗಬೇಕು. ರಾಮಾಯಣ ಕುರಿತು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್
Advertisement
Advertisement
ಚರ್ಚಿಸಿ ತೀರ್ಮಾನ ಕೈಗೊಳ್ಳಿ: ಶಾಲಾ ಪಠ್ಯಪುಸ್ತಕದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಶಿಕ್ಷಣ ತಜ್ಞರು ಹಾಗೂ ಮನಶಾಸ್ತ್ರಜ್ಞರು ಇದ್ದಾರೆ, ಅವರೊಂದಿಗೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಇದನ್ನ ಕೇವಲ ಒಬ್ಬರು ಮಾತ್ರ ತೀರ್ಮಾನ ಮಾಡಬಾರದು. ಇದರಿಂದ ಸಮಾಜದಲ್ಲಿ ಗೊಂದಲ ನಿರ್ಮಾಣ ಆಗುತ್ತದೆ. ಎಲ್ಲರೂ ಚರ್ಚಿಸಿ ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್ ಪಂತ್ ಮೊದಲ ರಿಯಾಕ್ಷನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k