ಕೋಲ್ಕತ್ತಾ: ದುರ್ಗಾ ಪೂಜೆ ಹಬ್ಬದಿಂದ ಹೊರಗುಳಿಯಂತೆ ನೋಡಿಕೊಳ್ಳಲು ಕೈದಿಗಳಿಗೆ ಆ ದಿನದಂದು ಮಟನ್ ಬಿರಿಯಾನಿ, ಚಿಕನ್ ಕರಿ ನೀಡಲು ಪಶ್ಚಿಮ ಬಂಗಾಳ ಕ್ರಮವಹಿಸಿದೆ.
ಕೈದಿಗಳಿಗೆ ನೀಡುವ ಆಹಾರದ ಮೆನುವಿನಲ್ಲಿ ಬದಲಾವಣೆ ತರಲಾಗಿದೆ. ಮಟನ್ ಬಿರಿಯಾನಿ, ಬಸಂತಿ ಪಲಾವ್, ಚಿಕನ್ ಕರಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲಾಗಿರುವ ಮೆನುವು ಷಷ್ಠಿ (ಅ.9) ರಿಂದ ದಶಮಿ (ಅ.12) ವರೆಗೆ ದುರ್ಗಾ ಪೂಜೆಯ ಪ್ರಾರಂಭ ಮತ್ತು ಅಂತ್ಯದ ವರೆಗೂ ಈ ವಿಶೇಷ ಭೋಜನಾ ಇರಲಿದೆ.
Advertisement
ಪ್ರತಿ ಹಬ್ಬದ ಸಮಯದಲ್ಲಿ ಉತ್ತಮ ಆಹಾರಕ್ಕಾಗಿ ಕೈದಿಗಳು ವಿನಂತಿ ಮಾಡಿಕೊಳ್ಳುತ್ತಿದ್ದರು. ನಾವು ಈ ವರ್ಷ ಹೊಸ ಮೆನುವನ್ನು ತಂದಿದ್ದೇವೆ. ಇದು ಅವರ ಮುಖದಲ್ಲಿ ನಗು ತಂದಿದೆ ಎಂಬ ಭರವಸೆ ಇದೆ. ನಾವು ವೈಯಕ್ತಿಕವಾಗಿ ಅವರನ್ನು ಸುಧಾರಿಸಲು ಇದು ಅತ್ಯಂತ ಸಕಾರಾತ್ಮಕ ಕ್ರಮ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಅಡುಗೆ ಕೆಲಸ ಮಾಡುವ ಕೈದಿಗಳೇ ದುರ್ಗಾ ಪೂಜೆಯ ಸಂದರ್ಭದಲ್ಲಿ ಖಾದ್ಯಗಳನ್ನು ತಯಾರಿಸಲಿದ್ದಾರೆ. ಮೆನುವಿನಲ್ಲಿ ಮಚರ್ ಮಾತಾ ದಿಯೆ ಪುಯಿ ಶಕ್, ಮಾಚರ್ ಮಾತಾ ದಿಯೆ ದಾಲ್, ಲುಚಿ- ಚೋಲರ್ ದಾಲ್, ಪಯೇಶ್ (ಬಂಗಾಳಿ ಗಂಜಿ), ಚಿಕನ್ ಕರಿ, ಆಲು ಪೊಟೋಲ್ ಚಿಂಗ್ರಿ, ‘ರೈತಾ’ (ಮಿಶ್ರಿತ ಮೊಸರು) ಮತ್ತು ‘ಬಸಂತಿ ಪಲಾವ್ ಜೊತೆ ಮಟನ್ ಬಿರಿಯಾನಿ ಇದೆ.
Advertisement
ಕೈದಿಗಳ ಧಾರ್ಮಿಕ ಭಾವನೆ ಗೌರವಿಸಲು ಎಲ್ಲರಿಗೂ ಮಾಂಸಾಹಾರ ನೀಡಲಾಗುವುದಿಲ್ಲ. ಕೈದಿಗಳು ತಮಗೆ ಬೇಕಾದ ಖಾದ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.