ಅಂದು ಮಹಾನ್ ಕುಡುಕ- ಈಗ ಗಾಂಧಿಯ ಕಟ್ಟಾ ಅನುಯಾಯಿಯಾಗಿದ್ದಾರೆ ಗದಗ್‍ನ ಮುತ್ತಣ್ಣ

Public TV
1 Min Read
GDG copy

ಗದಗ: ಅಹಿಂಸಾ ತತ್ವವನ್ನ ಪ್ರತಿಪಾದಿಸಿದ್ದ ಮಹಾತ್ಮನ ನೆನೆಯೋದು ಕಷ್ಟವೇ. ಇನ್ನ ಅವರ ತತ್ವಗಳ ಅಳವಡಿಕೆ, ಮಾರ್ಗದಲ್ಲಿ ನಡೆಯೋದು ದೂರದ ಮಾತೇ ಸರಿ. ಆದರೆ, ನಮ್ಮ ಪಬ್ಲಿಕ್ ಹೀರೋ ಅವರು ಮಾತ್ರ ಗಾಂಧೀಜಿ ಜೀವನ ಚರಿತ್ರೆಯಿಂದ ಪ್ರಭಾವಿತರಾಗಿ ಗಾಂಧೀಜಿ ದಾರಿಯಲ್ಲೇ ನಡೀತಿದ್ದಾರೆ.

ಹೌದು. ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಮುತ್ತಣ್ಣ ಚನ್ನಬಸಪ್ಪ ತಿರ್ಲಾಪೂರ ಅವರು ಮೊದಲು ಮಹಾನ್ ಕುಡುಕರಾಗಿದ್ದರು. 24 ಗಂಟೆಯೂ ಕುಡೀತಿದ್ದರು. 2016ರ ಮಹದಾಯಿ ಹೋರಾಟದ ವೇಳೆ ವಿಷಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದರು.

vlcsnap 2018 10 03 13h06m19s33

ಆದರೆ, ಒಮ್ಮೆ ತಿರುಪತಿಗೆ ಹೋಗಿದ್ದಾಗ ಅಲ್ಲಿ ರಾಷ್ಟ್ರಪಿತನ ಜೀವನ ಚರಿತ್ರೆ ನೋಡಿ, ಅಲ್ಲಿಂದಲೇ ಜೀವನ ಶೈಲಿ ಬದಲಾಯಿಸಿಕೊಂಡಿದ್ದಾರೆ. ಪ್ರಾಣಿಹಿಂಸೆ, ಧೂಮಪಾನ, ಮಧ್ಯಪಾನ ಎಲ್ಲವನ್ನೂ ವರ್ಜಿಸಿ, ಇದೀಗ ಗಾಂಧೀಜಿಯ ಕಟ್ಟಾ ಅನುಯಾಯಿಯಾಗಿದ್ದಾರೆ. 3 ವರ್ಷಗಳಲ್ಲಿ ತನ್ನ ಸುತ್ತಲಿನ ಸುಮಾರು 50 ಜನರಿಗೆ ಗಾಂಧಿ ತತ್ವಗಳ ಮೂಲಕ ಕುಡಿತ ದಾಸ್ಯದಿಂದ ಮುಕ್ತಿಗೊಳಿಸಿದ್ದಾರೆ. ಬಳಿಕ ಗಾಂಧೀಜಿ ವೇಷದೊಂದಿಗೆ ಮಹಾದಾಯಿ ಹೋರಾಟ, ಕಪ್ಪತ್ತಗುಡ್ಡ ಸಂರಕ್ಷಣೆ, ನಾಡು-ನುಡಿ ಬಗೆಗಿನ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಗಮನ ಸೆಳೆದಿದ್ದಾರೆ.

vlcsnap 2018 10 03 13h06m24s77
ಅ. 1ರ ಗಾಂಧಿ ಜಯಂತಿ ಅಂಗವಾಗಿ ಗದಗ ಜಿಲ್ಲೆಯ ಕರ್ಕಿಕಟ್ಟಿ ಗ್ರಾಮದಿಂದ ಹುಬ್ಬಳ್ಳಿವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ತಾವು ಹೋದ ಕಡೆಯಲ್ಲೆಲ್ಲ ಗಾಂಧೀಜಿ ತತ್ವಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ. ಹೀಗಾಗಿ, ಇವರನ್ನ ಆಧುನಿಕ ಗಾಂಧೀಜಿ ಅಂತಲೇ ಜನ ಕರೆಯುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=SEPoM362Epc

Share This Article
Leave a Comment

Leave a Reply

Your email address will not be published. Required fields are marked *