ನವದೆಹಲಿ: ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ನ್ಯಾಯ ಒದಗಿಸುವುದಕ್ಕಿಂತ ಅಪರಾಧ ಮರೆಮಾಚಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದರು.
ಮಹಾರಾಷ್ಟ್ರದ ಥಾಣೆ (Maharashtra’s Thane) ಜಿಲ್ಲೆಯ ಬದ್ಲಾಪುರದ ಶಿಶುವಿಹಾರದಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು, ಸಂತ್ರಸ್ಥ ಮಕ್ಕಳ ಪೊಷಕರು ದೂರು ನೀಡಿದ 12 ಗಂಟೆಗಳ ಬಳಿಕ ಎಫ್‌ಐಆರ್ ದಾಖಲು ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: Andhra | ಫಾರ್ಮಾ ಕಂಪನಿಯಲ್ಲಿ ರಿಯಾಕ್ಟರ್ ಸ್ಫೋಟ – 14 ಮಂದಿ ಕಾರ್ಮಿಕರು ಸಾವು, 20 ಮಂದಿಗೆ ಗಾಯ
Advertisement
Advertisement
ಇಂತಹ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಜನರು ಪ್ರತಿಭಟನೆ ಮಾಡಬೇಕೇ, ಸಾರ್ವಜನಿಕರು ನ್ಯಾಯಕ್ಕಾಗಿ ಬೀದಿಗಿಳಿಯುವವರೆಗೂ ಅವರಿಗೆ ನ್ಯಾಯ ನೀಡುವ ಮೊದಲ ಹೆಜ್ಜೆ ಇಡಲಿಲ್ಲ, ನಾವು ಈಗ ಎಫ್‌ಐಆರ್ ದಾಖಲಿಸಲು ಪ್ರತಿಭಟನೆ ಮಾಡಬೇಕೇ? ಏಕೆ FIR ದಾಖಲಿಸಲು ಕಷ್ಟವಾಯಿತು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಇದನ್ನೂ ಓದಿ: ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ
Advertisement
ನ್ಯಾಯವನ್ನು ಒದಗಿಸುವುದಕ್ಕಿಂತ ಅಪರಾಧವನ್ನು ಮರೆಮಾಚಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗುತ್ತದೆ, ಅದರಲ್ಲಿ ಹೆಚ್ಚಿನ ಬಲಿಪಶುಗಳು ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರು. ಎಫ್‌ಐಆರ್ ದಾಖಲಿಸದಿರುವುದು ಸಂತ್ರಸ್ತರನ್ನು ನಿರುತ್ಸಾಹಗೊಳಿಸುವುದಲ್ಲದೆ, ಅಪರಾಧಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮಾದಕ ವ್ಯಸನಿಗಳಿಂದ ಸಿಲಿಕಾನ್ ಸಿಟಿಯ ಸ್ಮಶಾನದಲ್ಲಿ ಗಾಂಜಾ ಕೃಷಿ!
Advertisement
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರದ ನಂತರ, ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳ ವಿರುದ್ಧದ ದೌರ್ಜನ್ಯ ನಡೆದಿದೆ. ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಎಲ್ಲ ಸರ್ಕಾರಗಳು, ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಚಿಂತನ ಮಂಥನ ನಡೆಸಬೇಕು ಎಂದರು. ಇದನ್ನೂ ಓದಿ: Jhakhand | ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್