ಎಂಬಿ ಪಾಟೀಲ್‍ಗೆ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು: ಮುರುಘೇಂದ್ರ ಶ್ರೀ

Public TV
1 Min Read
MB PATIL MURUGENDRA SHREE

ವಿಜಯಪುರ: ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಎಂ.ಬಿ.ಪಾಟೀಲರಿಗೆ ಈ ಬಾರಿಯ ಸಚಿವ ಸಂಪುವ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಎದುರಿಸಬೇಕಾಗುತ್ತದೆಂದು ವಿರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮೀಜಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರೊಂದಿಗೆ ಮಮದಾಪುರದಲ್ಲಿ ಮಾತನಾಡಿದ ಶ್ರೀಗಳು, ಸಚಿವರ ಸಂಪುಟ ವಿಸ್ತರಣೆಯಲ್ಲಿ ಎಂ.ಬಿ.ಪಾಟೀಲರಿಗೆ ಸಚಿವರ ಸ್ಥಾನ ನೀಡಲೇಬೇಕು. ಅದರಲ್ಲೂ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಬೇಕು. ಏಕೆಂದರೆ ಅವರು ತಮ್ಮ ಅವಧಿಯಲ್ಲಿ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಅವರು ಏನು ಕೆಲಸ ಮಾಡಿದ್ದಾರೆಂಬುದನ್ನು ಖುದ್ದು ನಾನೇ ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಸಿಎಂ ಕುಮಾರಸ್ವಾಮಿಯವರಿಗೆ ತೋರಿಸುತ್ತೇನೆ. ಮೊದಲನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲೇ ಅವರಿಗೆ ಸಚಿವ ಸ್ಥಾನ ನೀಡದೇ ಅವಮಾನ ಮಾಡಿದ್ದೀರಿ. ಈ ಬಾರಿ ಮತ್ತೆ ಅದನ್ನೆ ಮಾಡಿದರೇ, ಸರಿ ಇರುವುದಿಲ್ಲವೆಂದು ಕಿಡಿಕಾರಿದ್ದಾರೆ.

HDK PRESSMEET 2

ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಉತ್ತರ ಕರ್ನಾಟಕ ಭಾಗದ ಕುರಿತು ಕಾಳಜಿಯಿದ್ದರೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿ ಆಯ್ಕೆ ಮಾಡುವ ಮೂಲಕ ಸಾಬೀತು ಪಡಿಸಲಿ. ಇಲ್ಲದಿದ್ದರೆ ಬಸವನಾಡಿನ ಸ್ವಾಮಿಜಿಗಳೆಲ್ಲಾ ಸೇರಿ ಉಗ್ರ ಸ್ವರೂಪದ ಹೋರಾಟವನ್ನು ಮಾಡುತ್ತೇವೆಂದು ಎಚ್ಚರಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾದ ಬಳಿಕ 6 ತಿಂಗಳಲ್ಲಿ ಒಂದು ಬಾರಿ ಮಾತ್ರ ಕೃಷ್ಣಾ ಕೊಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಎಂ.ಬಿ.ಪಾಟೀಲರು ಚಾಲನೆ ನೀಡಿದ್ದ ಅನೇಕ ಯೋಜನೆಗಳ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದಲ್ಲದೇ ತೆಲಂಗಾಣದವರು ಈಗ ಖ್ಯಾತೆ ತೆಗೆದಿದ್ದಾರೆ. ಇದರ ಬಗ್ಗೆ ಹೋರಾಟ ಮಾಡುವವರು ಯಾರೆಂದು ಪ್ರಶ್ನಿಸಿದ್ದಾರೆ.

DKSHIVAKUMAR

ಕಾವೇರಿ ಜಲ ವಿವಾದದ ಸಂದರ್ಭದಲ್ಲಿ ಇದೇ ಎಂ.ಬಿ.ಪಾಟೀಲರು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಈಗ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಕೊಳ್ಳಕ್ಕೆ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಡಿಕೆಶಿ ಮತ್ತು ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲವೆಂದು ಮುರುಘೇಂದ್ರ ಶ್ರೀ ಆಕ್ರೋಶ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *