ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ನೆಲೆಸಿರುವ ಗುಜರಾತ್‍ನ ವೊಹ್ರಾ ಮುಸ್ಲಿಮರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದನ್ನು ತಿಳಿದ ಪಾಕಿಸ್ತಾನ ಹೊಟ್ಟೆಕಿಚ್ಚು ಪಟ್ಟು ಟ್ವೀಟ್ ಮಾಡಿ ಮುಖಭಂಗ ಮಾಡಿಕೊಂಡಿದೆ.
ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾಗೂ ‘ಭಾರತ್ ಮಾತಾ ಕೀ ಜೈ’ ಘೋಷಣೆಯನ್ನು ಕೂಗಿ ಮುಸ್ಲಿಂ ಬಾಂಧವರು ನಮೋ ಅವರಿಗೆ ಭವ್ಯ ಸ್ವಾಗತ ಕೋರಿದರು. ಈ ವಿಡಿಯೋವನ್ನು ಪ್ರಧಾನ ಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಇದನ್ನು ನೋಡಿ ಪಾಕ್ ಹೊಟ್ಟೆ ಉರಿದುಕೊಂಡಿದೆ. ಬಿಜೆಪಿ ಹಾಗೂ ಮೋದಿ ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿರುವ ಕುತಂತ್ರಿ ಪಾಕಿಸ್ತಾನಕ್ಕೆ ಈ ಮೂಲಕ ಭಾರೀ ಮುಖಭಂಗವಾಗಿದೆ.
Advertisement
Advertisement
ಈ ಟ್ವೀಟಿಗೆ ಉರಿದುಕೊಂಡು ಪಾಕ್ ಸಚಿವ ಫವಾದ್ ಚೌಧರಿ, ರೀ-ಟ್ವೀಟ್ ಮಾಡಿ ಟೀಕಿಸಿದ್ದಾರೆ. ‘ಈ ನಾಟಕಕ್ಕೆ ಎಷ್ಟು ಹಣ ಖರ್ಚಾಯಿತು’ ಎಂದು ಟ್ವೀಟ್ ಮಾಡಿದ್ದಾರೆ. ಫವಾದ್ ಚೌಧರಿ ಅವರ ಉದ್ದಟತನಕ್ಕೆ ಸಿಟ್ಟಿಗೆದ್ದ ಭಾರತೀಯರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಟೀಕೆ ಮೇಲೆ ಟೀಕೆ ಮಾಡಿ ಪಾಕಿಸ್ತಾನದ ಕಾಲೆಳೆದಿದ್ದಾರೆ.
Advertisement
ಕೆಲವರು ಟ್ವೀಟ್ ಮಾಡಿ, ದುಡ್ಡಿನ ಬಗ್ಗೆ ಮಾತನಾಡಬೇಡಿ, ನಿಮ್ಮ ಹತ್ರ ಇಲ್ಲದಿರುವುದರ ಬಗ್ಗೆ ಯಾಕೆ ಮಾತು ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನೂ ಕೆಲವರು, ಮುಸ್ಲಿಮರು ಮಾರಾಟಕ್ಕಿಲ್ಲ. ನಿಮ್ಮ ದೇಶದವರು 2 ರೂಪಾಯಿಗೆಲ್ಲಾ ಮಾರಾಟವಾಗಬಹುದು, ಆದರೆ ನಮ್ಮವರು ನಿಮ್ಮವರ ಥರ ಅಲ್ಲ ಎಂದು ಕಿಡಿಕಾರಿದ್ದಾರೆ. ಅದರಲ್ಲೂ ತಮಾಷೆ ಎಂದರೆ ಕೆಲವರು ಫವಾದ್ ಚೌಧರಿ ಅವರಿಗೆ ಅವರ ಮುಂದೆಯೇ ‘ಕಳ್ಳ’ ಎಂದು ಕೂಗುತ್ತಿರುವ ವಿಡಿಯೋ ಹಾಕಿ ತಿರುಗೇಟು ನೀಡಿದ್ದಾರೆ.
Advertisement
ಸದ್ಯ ಫವಾದ್ ಚೌಧರಿ ಟ್ವೀಟ್ ಭಾರತೀಯರನ್ನು ಕೆರಳಿಸಿದ್ದು, ಅವರು ಮಾಡಿದ ಒಂದೇ ಒಂದು ಟ್ವೀಟಿಗೆ ತಿರುಗೇಟು ಕೊಡಲು ತಾ ಮುಂದು, ನಾ ಮುಂದು ಎಂದು ನೆಟ್ಟಿಗರು ಒಬ್ಬರ ಮೇಲೊಬ್ಬರು ರೀ-ಟ್ವೀಟ್ ಮಾಡಿ ಸಖತ್ ಟಾಂಗ್ ಕೊಡುತ್ತಿದ್ದಾರೆ.
Warm welcome, warm conversations.
A glimpse of how Indians based in France welcomed PM @narendramodi. pic.twitter.com/IDWijoNfoD
— PMO India (@PMOIndia) August 22, 2019