– 4 ದಿಕ್ಕುಗಳಿಂದನೂ ಟ್ರಾಫಿಕ್ ಜಾಮ್ ಪಕ್ಕಾ
ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಇಂದು ಬೆಂಗಳೂರಲ್ಲಿ ಬರೋಬ್ಬರಿ 35 ಮುಸ್ಲಿಂ ಸಂಘಟನೆಗಳು ಬೃಹತ್ ರ‍್ಯಾಲಿಯನ್ನ ಆಯೋಜಿಸಿವೆ.
ಮಹಾನಗರಿಯ ದಶ ದಿಕ್ಕುಗಳಲ್ಲೂ ಬಹುತೇಕ ಟ್ರಾಫಿಕ್ ಜಾಮ್ ನಿಂದ ಆವರಿಸಿಕೊಳ್ಳಲಿದೆ. ಪೊಲೀಸ್ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖುದ್ದೂಸ್‍ಸಾಬ್ ಈದ್ಗಾ ಮೈದಾನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಜನಸಾಮಾನ್ಯರು ಟ್ರಾಫಿಕ್‍ನಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವುದು ನಿಶ್ಚಿತ. ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಮೆರವಣಿಗೆ ಬರಲಿದೆ.
Advertisement
Advertisement
ಎಲ್ಲಿಲ್ಲಿ ಟ್ರಾಫಿಕ್ ಜಾಮ್?
ನಾಲ್ಕು ದಿಕ್ಕುಗಳಿಂದ ಮೆರವಣಿಗೆ ಸಾಗಲಿದ್ದು, ಗೀತಾ ಜಂಕ್ಷನ್ – ಸೌತ್‍ಎಂಡ್ ಸರ್ಕಲ್ – ಮಿನರ್ವ ಸರ್ಕಲ್- ಟೌನ್‍ಹಾಲ್- ಮೈಸೂರು ಬ್ಯಾಂಕ್ ಸರ್ಕಲ್-ಜಯಮಹಲ್ ಮೂಲಕ ಬೈಕ್ ರ‍್ಯಾಲಿ ನಡೆಯಲಿದ್ದು ಎಲ್ಲಾ ಕಡೆ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಇದ್ದೇ ಇರುತ್ತೆ. ಇತ್ತ ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್ ಮೂಲಕ ಮೆರವಣಿಗೆ ಸಾಗಲಿದೆ. ಹಾಗಾಗಿ, ಈ ಭಾಗದಲ್ಲೂ ಟ್ರಾಫಿಕ್ ಜಾಮ್ ಆಗೋದು ಪಕ್ಕಾ. ಇದನ್ನೂ ಓದಿ: ರಾಜ್ಯದೆಲ್ಲೆಡೆ ಇಂದು `ಪೌರತ್ವ’ ಕಿಚ್ಚು- ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ
Advertisement
Advertisement
ಲಗ್ಗೆರೆ-ರಾಜಾಜಿನಗರ- ನವರಂಗ- ರೇಸ್‍ಕೋರ್ಸ್-ಮೇಖ್ರಿ ವೃತ್ತ- ಜಯಮಹಲ್ ಮತ್ತೊಂದು ಮೆರವಣಿಗೆ ಬರಲಿದೆ. ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ, ಇಂದಿರಾನಗರ, ಜೆಬಿ ನಗರ, ಓಲ್ಡ್ ಏರ್‍ಪೋರ್ಟ್ ರೋಡ್ ರಸ್ತೆ, ಹಲಸೂರು ಮಾರ್ಗ, ಹಿಸೂರು, ಬನ್ನೇರುಘಟ್ಟ ಮೂಲಕವೂ ರ‍್ಯಾಲಿ ನಡೆಯಲಿದೆ. ಫೈನಲಿ ಈ ಎಲ್ಲಾ ಮೆರವಣಿಗೆ ನಂದಿದುರ್ಗದ ಖುದ್ದೂಸ್ ಈದ್ಗಾ ಮೈದಾನದಲ್ಲಿದ್ದ ಎಲ್ಲಾ ಕಡೆ ಫುಲ್ ಟ್ರಾಫಿಕ್ ಜಾಮ್ ಇರುತ್ತದೆ.
ಹೀಗಾಗಿ ಬೆಂಗಳೂರಿನ ಜನ ಇಂದು ರೋಡಿಗಿಳಿಯುವ ಮುನ್ನ ಸ್ವಲ್ಪ ಹುಷಾರಾಗಿರಿ. ಈ ರಸ್ತೆಗಳ ಬದಲು ಪೊಲೀಸರು ಸೂಚಿಸಿರುವ ಇತರೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಒಳ್ಳೆದು. ಇಲ್ಲಾಂದ್ರೆ ಟ್ರಾಫಿಕ್‍ನಲ್ಲಿ ಸಿಲುಕಿ ಪರದಾಡಬೇಕಾಗುತ್ತೆ.