ಬೀದರ್‌ನಲ್ಲಿ ಮಳೆಗಾಗಿ ಮುಸ್ಲಿಮರಿಂದ ಪ್ರಾರ್ಥನೆ

Advertisements

ಬೀದರ್: ಒಂದು ಕಡೆ ಭೀಕರ ಪ್ರವಾಹದಿಂದ ರಾಜ್ಯದ ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ಗಡಿ ಜಿಲ್ಲೆ ಬೀದರ್‌ನಲ್ಲಿ ಮಾತ್ರ ಬರಗಾಲ ತಾಂಡವಾಡುತ್ತಿದೆ.

Advertisements

ಬರಗಾಲದಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನರಿಗೆ ವರುಣ ದೇವ ಕೃಪೆ ತೋರಲಿ ಎಂದು ಬೀದರ್‌ನಲ್ಲಿ ಇಂದು ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಮತ್ತೊಂದು ಕಡೆ ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ನಿರಾಶ್ರಿತರರಿಗೆ ದೇಣಿಗೆ ಸಂಗ್ರಹ ಮಾಡುವ ಮೂಲಕ ಮುಸ್ಲಿಂ ಭಾಂದವರು ಮಾನವೀಯತೆ ಮೆರೆದಿದ್ದಾರೆ.

Advertisements

ಸಾವಿರಾರು ಮುಸ್ಲಿಂ ಭಾಂದವರು ಜಿಲ್ಲೆಯ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲಾ ಜಾತಿ, ಧರ್ಮ ಒಂದೇ ಎಂಬ ಸಾಮಾಜಿಕ ಸಂದೇಶವನ್ನು ಸಾರಿ ಸಾರಿ ಹೇಳಿದರು. ಈ ವೇಳೆ ಭೀಕರ ಪ್ರವಾಹಕ್ಕೆ ಬಿಜೆಪಿ ನಾಯಕರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ರಹೀಂ ಖಾನ್ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಯಾವಾಗಲು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಎಲ್ಲರೂ ಸೇರಿ ಕೆಲಸ ಮಾಡಿದ್ರೇನೆ ಆಗಲ್ಲಾ, ಆದ್ರೆ ಬಿಎಸ್‍ವೈ ಒಬ್ಬರಿಂದ ಆಗುತ್ತಾ? ಈ ಭೀಕರ ಪ್ರವಾಹ ಸಮಸ್ಯೆಗೆ ಬಿಜೆಪಿಯ ಕೇಂದ್ರ ಸರ್ಕಾರ ಶೀಘ್ರ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ರಹೀಂ ಖಾನ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Advertisements
Exit mobile version