– ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಮುಸ್ಲಿಮರಿಂದ ತಂಪು ಪಾನೀಯ ವಿತರಣೆ
ಬೆಂಗಳೂರು: ನಗರದಲ್ಲಿ ಗಣೇಶ ಉತ್ಸವದಲ್ಲಿ ಮೆರವಣಿಗೆ ಉದ್ದಕ್ಕೂ ಹೂ ಹಾಕಿ ಮುಸ್ಲಿಮರು ಭಾವೈಕ್ಯತೆ ಮೆರೆದಿದ್ದಾರೆ.
ಕೆ.ಆರ್ ಪುರಂನ ದೇವಸಂದ್ರದಲ್ಲಿ ವಿನಾಯಕ ಗೆಳೆಯರ ಬಳಗದಿಂದ ಗಣಪತಿ ಉತ್ಸವದ ಮೆರವಣಿಗೆ ಇತ್ತು. ಈ ವೇಳೆ ಏರಿಯಾದ ಮುಸ್ಲಿಮರು ಗಣೇಶನ ಮೆರವಣಿಗೆ ಉದ್ದಕ್ಕೂ ಹೂ ಹಾಕಿ ಸಂಭ್ರಮಿಸಿದ್ದಾರೆ. ಅಲ್ಲದೇ, ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ತಂಪು ಪಾನೀಯ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಮದ್ದೂರಲ್ಲಿ ಪ್ರಚೋದನಕಾರಿ ಭಾಷಣ – ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್
ಮದ್ದೂರಿನಲ್ಲಿ ಗಣೇಶ ಉತ್ಸವದ ವೇಳೆ ನಡೆದ ಘಟನೆಗೆ ಕೆಆರ್ ಪುರಂ ಮುಸ್ಲಿಮರು ಖಂಡನೆ ವ್ಯಕ್ತಪಡಿಸಿದ್ದಾರೆ. ಅಂತಹ ಘಟನೆಗಳು ಮರುಕಳಿಸಬಾರದು. ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಇರಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಘಟನೆಯನ್ನು ಖಂಡಿಸಿ ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈಗ ಮೆರವಣಿಗೆ ಸಂದರ್ಭದಲ್ಲಿ ಎಲ್ಲೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ಇದನ್ನೂ ಓದಿ: ಮದ್ದೂರು ಗಣೇಶ ಮೆರವಣಿಗೆಗೆ ಕಲ್ಲು ತೂರಿದ ಕೇಸ್ – ಪಾತ್ರವೇ ಇಲ್ಲದ ಪೊಲೀಸ್ ಅಧಿಕಾರಿ ವರ್ಗಾವಣೆ