ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹಾಗೂ ಅಶ್ವಥ್ ನಾರಾಯಣ್ (Ashwath Narayan) ಅವರು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಸಿದ್ರಾಮುಲ್ಲಾ ಖಾನ್ ಎಂದು ವ್ಯಂಗ್ಯವಾಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
26/11 ಮುಂಬೈ ದಾಳಿಯಲ್ಲಿ ಸಾರ್ವಜನಿಕರ ಪ್ರಾಣ ಉಳಿಸಲು ಪ್ರಾಣಾರ್ಪಣೆ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರವರ ವೀರಗಾಥೆಯುಳ್ಳ “ಕರಾಳ ರಾತ್ರಿ” ಪಾಠವನ್ನು ಕೈಬಿಟ್ಟವರು ತಾವು. ರಾಷ್ಟ್ರೀಯತೆಯ ಪರಮ ವಿರೋಧಿ @siddaramaiah, ಹೀಗಿರುವಾಗ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆಯದೆ ಬೇರೆ ಬಿರುದು ಕೊಟ್ಟಾರೆಯೇ?
7/8
— BJP Karnataka (@BJP4Karnataka) December 5, 2022
Advertisement
ಸಿದ್ರಾಮುಲ್ಲಾ ಖಾನ್ (Siddramulla Khan) ಹೇಳಿಕೆಯಿಂದ ಕುರುಬ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಆದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಸಿ.ಟಿ ರವಿ ಅವರು, ಸಿದ್ರಾಮುಲ್ಲಾ ಖಾನ್ ಜನರೇ ನೀಡಿರುವ ಬಿರುದು, ಈ ಹೇಳಿಕೆ ಕಾಂಗ್ರೆಸ್ಸಿಗರಿಗೆ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ ಎಂದು ಲೇವಡಿ ಮಾಡಿದ್ದಾರೆ.
Advertisement
Advertisement
ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿರುವ ಮುಸ್ಲಿಂ ಸಂಘಟನೆ ಸಿ.ಟಿ ರವಿ ಹಾಗೂ ಅಶ್ವಥ್ ನಾರಾಯಣ್ ಅವರನ್ನ ಕ್ಷಮೆ ಕೋರುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಬಿರುದು ನಾವಲ್ಲ, ಜನರೇ ನೀಡಿದ್ದಾರೆ – ಸಿದ್ದುಗೆ ಬಿಜೆಪಿ ಟಾಂಗ್
Advertisement
ಮುಸ್ಲಿಂ ಸಂಘಟನೆಯ ಪ್ರಮುಖ ಸಾಧಿಕ್ ಪಾಷಾ ಮಾತನಾಡಿದ್ದು, ಬಿಜೆಪಿ ನಾಯಕರ ಮಾತುಗಳು ಮುಸ್ಲಿಂ ಮುಖಂಡರನ್ನು (Muslim Leaders) ಕೆರಳಿಸಿದೆ. ಈ ಹೇಳಿಕೆಗಳು ನಮಾಜ್ ಓದಿಸುವ ಮುಲ್ಲಾಗಳಿಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ. ದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಹೇಳಿಕೆಯಿಂದ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ – CT ರವಿ
ಸಿ.ಟಿ ರವಿ ಅಶ್ವಥ್ ನಾರಾಯಣ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಕೋರ್ಟ್ (Court) ಮೆಟ್ಟಿಲೇರೋದಾಗಿ ಮುಸ್ಲಿಂ ಸಂಘಟನೆ ಎಚ್ಚರಿಕೆ ನೀಡಿದೆ. ಮುಸ್ಲಿಂ ಧರ್ಮದ ಹೆಸರನ್ನು ಇವರ ರಾಜಕೀಯಕ್ಕೆ ಎಳೆದು ತರೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.