ಚಿಕ್ಕಮಗಳೂರು: ಮುಸ್ಲಿಮರು (Muslims) ಎಲ್ಲೂ ಈಶ್ವರ ಅಲ್ಹಾ ತೇರೇ ನಾಮ್ ಅಂತ ಹೇಳಿಲ್ಲ, ನಾನಂತೂ ಹೇಳಿದ್ದನ್ನು ಕೇಳಿಲ್ಲ. ಮಸೀದಿಗಳಲ್ಲೂ ಹೇಳಿಕೊಟ್ಟಿಲ್ಲ. ಮದ್ರಾಸಗಳಲ್ಲಿ ಹೇಳಿಕೊಟ್ಟಿದ್ರೆ ಭಯೋತ್ಪಾದಕರುಗಳೇ ಇರುತ್ತಿರಲಿಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ (C.T. Ravi) ಹೇಳಿದರು.
ದತ್ತಪೀಠದಲ್ಲಿ (Datta Peeta) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹಿಂದೂಗಳು ರಾಮ್ ರಹೀಮ್ ಒಂದೇ ಎಂದು ಹೇಳ್ತಿದ್ದೀವಿ, ಮುಸ್ಲಿಮರು ಹೇಳ್ತಿಲ್ಲ. ರಾಮ್ ರಹೀಮ್ ಒಂದೇ ಎಂದು ಅವರು ಹೇಳಿಕೊಟ್ಟಿದ್ರೆ ಜಗಳಗಳು ಆಗ್ತಿರಲಿಲ್ಲ. ನಾವು ಅಲ್ಹಾ ದೇವ್ರು ಅನ್ನೋಕೆ ತೊಂದರೆ ಇಲ್ಲ. ನಮ್ಮ ಪರಂಪರೆ ಅದಕ್ಕೆ ಅವಕಾಶ ಕೊಡುತ್ತೆ. ಸಂಕುಚಿತ ಮನೋಭಾವದವರು ಬದಲಾಗಬೇಕು ಎಂದರು. ಇದನ್ನೂ ಓದಿ:ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ – ಬೃಹತ್ ಶೋಭಾಯಾತ್ರೆಗೆ ಶಾಂತಿಯುತ ತೆರೆ
ಇಸ್ಲಾಂ ಹೆಸರಲ್ಲಿ ಅನ್ಯ ಧಾರ್ಮಿಕ ಕ್ಷೇತ್ರ ಕಬಳಿಸೋದು ಅನಾಗರೀಕತೆ, ಅಧರ್ಮ. ನಾಶ ಮಾಡೋದು ಧರ್ಮ ಆಗಲು ಸಾಧ್ಯವಿಲ್ಲ. ಸನಾತನ ಧರ್ಮ ಭಾರತೀಯ ಸ್ತ್ರೀಯರನ್ನ ಗೌರವಿಸುವ ಸಂಸ್ಕೃತಿ ಇದೆ. ಆದರೆ ಪರಸ್ತ್ರೀ ಮೇಲೆ ಅತ್ಯಾಚಾರ ಮಾಡು, ಅನ್ನೋದು ಧರ್ಮ ಆಗಲು ಸಾಧ್ಯವಿಲ್ಲ. ಇಸ್ಲಾಂ ಹೆಸರಲ್ಲಿ ಬಲತ್ಕಾರ, ಲೂಟಿ, ಮತಾಂತರ ಮಾಡಿದ್ದಾರೆ. ಇದನ್ನ ಭಾರತೀಯ ನಿದರ್ಶನಗಳು ಧರ್ಮ ಅನ್ನಲ್ಲ, ಪೈಶಾಚಿಕ ಮತ ಎನ್ನಬಹುದು ಎಂದು ವಾಗ್ದಾಳಿ ನಡೆಸಿದರು.
ಪೈಶಾಚಿಕ ಪರಂಪರೆಯನ್ನು ಧರ್ಮ ಅಂತ ಹೇಳಲು ಆಗಲ್ಲ. ಪಿಚಾಚಿಗಳ ಧರ್ಮ, ರಾಕ್ಷಸರ ಧರ್ಮ ಅಂತ ಹೇಳಬಹುದು. ಇನ್ನೊಬ್ಬರನ್ನ ನಾಶ ಮಾಡಲು ಹೋಗಿ ನೀವು ನಾಶವಾಗ್ತೀರಿ, ನಾಶ ಮಾಡೋದೆ ಉದ್ದೇಶವಾದ್ರೆ ನಾವ್ಯಾರು ತಡೆಯಲು ಆಗಲ್ಲ. ಮೋಸ ಹೆಚ್ಚು ಕಾಲ ನಡೆಯಲ್ಲ, ಕಳ್ಳನ ಹೆಂಡ್ತಿ ಯಾವತ್ತಿದ್ರು.. ಅದು ಆಗೇ ಆಗ್ತೀರಾ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 11 ತಿಂಗಳಲ್ಲಿ ಗುಂಡಿ ಕಾರಣಕ್ಕೆ 580 ಜನ ಸಾವು, ಇದು ಸರ್ಕಾರಿ ನಿರ್ಲಕ್ಷ್ಯದ ಕೊಲೆ: ಸಿ.ಟಿ ರವಿ

