– ಗೋಮಾಂಸ ಭಕ್ಷಕರು, ದೇವರನ್ನ ನಂಬದವರಿಗೆ ಗುತ್ತಿಗೆ ಹೇಗೆ ಕೊಟ್ರಿ?
– ಟೆಂಡರ್ ರದ್ದಾಗದಿದ್ರೆ ಆಂದೋಲನ ಮಾಡ್ತೀವಿ ಅಂತ ಕೇಂದ್ರಕ್ಕೆ ಎಚ್ಚರಿಕೆ
ಬೆಂಗಳೂರು: ಅಯೋಧ್ಯೆ (Ayodhya) ರಾಮಮಂದಿರ (Ram Mandir) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಸ್ಲಿಮರಿಗೆ ಟೆಂಡರ್ ನೀಡಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದರು.
Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಆದ್ಯತೆ ನೀಡಲಾಗಿದೆ. ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಮುಸ್ಲಿಮರಿಗೆ ಟೆಂಡರ್ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಸೌಜನ್ಯ ಕೇಸ್ – ಸುಳ್ಳು ಹೇಳಿಕೆ, ವದಂತಿಗಳಿಗೆ ಗೊಂದಲಕ್ಕೀಡಾಗಬೇಡಿ: ವೀರೇಂದ್ರ ಹೆಗ್ಗಡೆ ಬೇಸರ
Advertisement
Advertisement
ಅನೇಕ ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ. ಇದಕ್ಕೆ ತೊಡಕಾಗಿದ್ದು ಮುಸ್ಲಿಮರು. ಕೋರ್ಟ್ ಆದೇಶದ ಬಳಿಕವೂ ನಾವು ಅಲ್ಲೇ ಮಸೀದಿ ನಿರ್ಮಾಣ ಮಾಡ್ತೀವಿ ಅಂತ ಹೇಳ್ತಾರೆ. ಈ ರೀತಿ ಇರಬೇಕಾದ್ರೆ ಮುಸ್ಲಿಮರಿಗೆ ಈಗ ಕಟ್ಟಡ ನಿರ್ಮಾಣದ ಟೆಂಡರ್ ನೀಡಲಾಗಿದೆ. ಕೇಂದ್ರ ಸರ್ಕಾರ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್ ನೀಡಿರುವುದು ಖಂಡನೀಯ ಎಂದರು.
Advertisement
ರಾಜಸ್ತಾನ ಮೂಲದ ಕಂಪನಿಯ ಇಕ್ಬಾಲ್ ಮಿಸ್ತ್ರಿ ಎಂಬಾತನಿಂದ ಕೆಲಸ ನಡೆಯುತ್ತಿದೆ. ಗರ್ಭಗುಡಿ ನಿರ್ಮಾಣದ ಟೆಂಡರ್ ಈತನಿಗೆ ನೀಡಲಾಗಿದೆ. ಇದರಿಂದ 100 ಕೋಟಿ ಹಿಂದೂಗಳಿಗೆ ಅವಮಾನ ಆಗಿದೆ. ಟ್ರಸ್ಟಿಗಳಲ್ಲಿ ಒಬ್ಬರಾದ ಪೇಜಾವರ ಶ್ರೀಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಅಲ್ಲಿರುವಂತಹ ಮುಸ್ಲಿಂ ಕೆಲಸಗಾರರನ್ನು ಹೊರಹಾಕಬೇಕು. ಅಲ್ಲಾ ಒಬ್ಬನೆ ದೇವರು ಅನ್ನುವವನಿಗೆ ರಾಮನ ಗುಡಿ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹೊಸ ಸರ್ಕಾರದಿಂದ ವರ್ಗಾವಣೆಗೊಂಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ತಡೆ ಭಾಗ್ಯ
ಗೋಮಾಂಸ ಭಕ್ಷಕರು, ದೇವರನ್ನ ನಂಬದವರಿಗೆ ಹೇಗೆ ಗುತ್ತಿಗೆ ಕೊಟ್ಟಿದ್ದೀರಿ. ಅವರನ್ನ ಕೂಡಲೇ ವಾಪಸ್ ಕಳಿಸಬೇಕು. ಅವರು ವಾಪಸ್ ಆದ ಬಳಿಕ ನಾವು ಅಲ್ಲಿಗೆ ಹೋಗಿ ಶುದ್ದಿ ಮಾಡ್ತೇವೆ. ಈ ಬಗ್ಗೆ ಶ್ರೀಗಳಿಗೆ ಮನವಿ ಮಾಡಲಾಗಿದೆ. ಕೂಡಲೇ ಅಲ್ಲಿರುವ ಗುತ್ತಿಗೆದಾರ ಮುಸ್ಲಿಮರನ್ನ ಹೊರ ಹಾಕಬೇಕು. ಇದು ಇಡೀ ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡಿದ ಹಾಗೆ ಎಂದು ತಿಳಿಸಿದರು.
ಒಂದು ವೇಳೆ ಟೆಂಡರ್ ರದ್ದಾಗದಿದ್ರೆ ಆದೋಲನ ಶುರುವಾಗುತ್ತೆ. ಈಗಾಗಲೇ ಈ ಬಗ್ಗೆ 12 ರಾಜ್ಯಗಳ ಜೊತೆ ಚರ್ಚಿಸಿದ್ದೇವೆ. 12 ರಾಜ್ಯದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಟೆಂಡರ್ ರದ್ದು ಮಾಡದಿದ್ರೆ ರಾಮಮಂದಿರ ಉದ್ಘಾಟನೆ ಆಗಲು ಬಿಡಲ್ಲ ಎಚ್ಚರಿಸಿದರು.
Web Stories