ರಾಯಚೂರು: ರಂಜಾನ್ (Ramzan) ಹಿನ್ನೆಲೆಯಲ್ಲಿ ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ದರ್ಶನ ಪಡೆದು ಮುಸ್ಲಿಂ ಭಕ್ತರು ಮಠದಲ್ಲೇ ಹಬ್ಬವನ್ನ ಆಚರಿಸಿದರು.
ಮಂತ್ರಾಲಯ ಸುತ್ತಮುತ್ತಲ ಗ್ರಾಮದ ಮುಸ್ಲಿಂ ಭಕ್ತರು ಶನಿವಾರ ವೃಂದಾವನ ದರ್ಶನ ಪಡೆದರು. ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮುಸ್ಲಿಂ ಭಕ್ತರಿಗೆ ಆಶೀರ್ವಚನ ನೀಡಿದರು. ಅನುಗ್ರಹ ಸಂದೇಶ ನೀಡಿ ಸ್ವಾಮೀಜಿ ಮುಸ್ಲಿಂ ಭಕ್ತರಿಗೆ ಆಶೀರ್ವದಿಸಿದರು. ಇದನ್ನೂ ಓದಿ: ಯಾವನ್ ರೀ ಅವನು ಪ್ರತಾಪ್ ಸಿಂಹ ಇಲ್ಯಾಕೆ ಬಂದು ಪ್ರಚಾರ ಮಾಡ್ತಿದ್ದಾರೆ : ಸಿದ್ದರಾಮಯ್ಯ ಕಿಡಿ
Advertisement
Advertisement
ಮಠದ ಪ್ರಾಂಗಣದಲ್ಲಿ ಮಂತ್ರಾಕ್ಷತೆ, ಪರಿಮಳ ಪ್ರಸಾದ ನೀಡಿದರು. ಹಿಂದೂ, ಮುಸ್ಲಿಂ ಭಾವೈಕ್ಯತೆಯನ್ನು ಮಂತ್ರಾಲಯ ಮಠ ಮೆರೆದಿದೆ. ಮಂತ್ರಾಲಯ ಮಠಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂ ಭಕ್ತರು ಇರುವುದರಿಂದ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಮಠದಲ್ಲಿ ಆಚರಿಸಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿ ಚುನಾವಣಾ ಅಖಾಡ ಹೇಗಿದೆ? ಕಾಂಗ್ರೆಸ್ ಅಡ್ಡಕ್ಕೆ ಕೈ ಹಾಕುತ್ತಾ ಬಿಜೆಪಿ?