ಚಾಮರಾಜನಗರ: ಕೋಮು ಸೌಹಾರ್ದ ಕದಡುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಚಾಮರಾಜನಗರ (Chamarajanagar) ದಲ್ಲೊಂದು ಮಾನವೀಯ ಕಾರ್ಯ ನೆರವೇರಿದೆ.
Advertisement
ಚಾಮರಾಜನಗರ ಅಹಮದ್ ನಗರದಲ್ಲಿ ನಂಜಮ್ಮ ಎಂಬ ವೃದ್ಧೆ ವಯೋಸಹಜ ಅನಾರೋಗ್ಯ ದಿಂದ ಮೃತಪಟ್ಟಿದ್ದರು. ಈ ವೇಳೆ ಹತ್ತಿರದ ಸಂಬಂಧಿಕರು ಬಂದು ಹೋದರಷ್ಟೇ. ಆದರೆ ಯಾರೂ ಸಹ ಈಕೆಯ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ. ವಿಷಯ ತಿಳಿದ ಅಹಮದ್ ನಗರದ ಮುಸ್ಲಿಂ (Muslim) ಯುವಕರು ಸ್ಮಶಾನಕ್ಕೆ ನಂಜಮ್ಮನ ಶವ ಹೊತ್ತು ಸಾಗಿಸಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಮತಾಂಧತೆಯನ್ನ ಭಯೋತ್ಪಾದನೆಗೆ ಕಚ್ಛಾವಸ್ತುವಿನಂತೆ ಬಳಕೆ ಮಾಡಿಕೊಳ್ತಿತ್ತು- PFI ನಿಷೇಧ ಸಮರ್ಥಿಸಿಕೊಂಡ ಶಾ
Advertisement
Advertisement
ನಂಜಮ್ಮನ ಶವಸಂಸ್ಕಾರಕ್ಕೆ ಸಂಬಂಧಿಕರು ಬಾರದೆ ಇರಲು ಕಾರಣ ಇಷ್ಟೆ. ನಂಜಮ್ಮ ಅಂತರ್ಜಾತಿ ವಿವಾಹವಾಗಿದ್ದರು. ಹಾಗಾಗಿ ಇವರ ಬಂಧು ಬಳಗದವರೆಲ್ಲಾ ದೂರ ಆಗಿದ್ದರು. ಹಲವು ವರ್ಷಗಳ ಹಿಂದೆ ಈಕೆಯ ಪತಿ ತೀರಿಕೊಂಡಿದ್ದರು. ಹಾಗಾಗಿ ನಂಜಮ್ಮ ತಮ್ಮ ಮಗಳೊಂದಿಗೆ ಚಾಮರಾಜನಗರದ ಅಹಮದ್ ನಗರದಲ್ಲಿ ಬಾಡಿಗೆ ಶೆಡ್‍ವೊಂದರಲ್ಲಿ ವಾಸವಿದ್ದರು. ಅಂತರ್ಜಾತಿ ವಿವಾಹವಾಗಿದ್ದರು ಎಂಬ ಒಂದೇ ಕಾರಣಕ್ಕೆ ಮೊಮ್ಮಗಳ ಪತಿ ಹೊರತುಪಡಿಸಿ ನಂಜಮ್ಮನ ಅಂತ್ಯಸಂಸ್ಕಾರಕ್ಕೆ ಬೇರೆ ಯಾವ ನೆಂಟರಿಷ್ಟರು ಕೈ ಜೋಡಿಸಲಿಲ್ಲ. ವಿಷಯ ಅರಿತ ಮುಸ್ಲಿಂ ಯುವಕರು ತಾವೇ ಹೋಗಿ ಶವಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತಂದು ಹಿಂದೂ ಸಂಪ್ರದಾಯ (Hindu tradition) ದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
Advertisement
ಕೋಮು ಸಂಘರ್ಷ, ಧರ್ಮದಂಗಲ್‍ನಂತಹ ಘಟನೆಗಳಿಂದ ಮನುಷ್ಯ ಮನುಷ್ಯರ ನಡುವೆಯೇ ಕಂದಕ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರು ಮೈಯಲ್ಲು ಹರಿಯುತ್ತಿರುವುದು ಕೆಂಪು ರಕ್ತವೇ. ನಾವೆಲ್ಲಾ ಮನುಷ್ಯರು ಎಂದುಕೊಂಡು ಹಿಂದೂ ಮಹಿಳೆ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು ಸಾಮರಸ್ಯ ಮೆರೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k