ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ಮುಸ್ಲಿಮ್ ಯುವಕರ ಕಲ್ಲು ತೂರಾಟದಲ್ಲಿ ಸ್ವಲ್ಲ ಹೆಚ್ಚು ಕಡಿಮೆಯಾಗಿದ್ದರೂ ಪೊಲೀಸರ (Police) ಹೆಣಗಳು ಬೀಳುವ ಸಾಧ್ಯತೆ ಇತ್ತು.
ಫೆ.10ರ ರಾತ್ರಿ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಎಫ್‌ಐಆರ್‌ನಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನಗಳಿಗೆ ಹಾನಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಮುಸ್ಲಿಮ್ ಯುವಕರು ಕಲ್ಲು ತೂರಾಟ ಮಾಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.
ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984 ಮತ್ತು ಭಾರತೀಯ ನ್ಯಾಯಾ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಸೆಕ್ಷನ್ 110 ರ ಅಡಿ ಕೇಸ್ ದಾಖಲಾಗಿರುವ ಕಾರಣ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಇದನ್ನೂ ಓದಿ: ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್
ಯಾವ್ಯಾವ ಸೆಕ್ಷನ್ ಅಡಿ ಕೇಸ್?
189(2) – ಕಾನೂನು ವಿರುದ್ಧ ಕೂಟದ ಸದಸ್ಯ
189(3) – ಚೆದುರು ಹೋಗಲು ಸಮಾವೇಶ ಮಾಡಲಾಗಿದೆ ಎಂದು ಗೊತ್ತಿದ್ದರೂ ಕಾನೂನು ವಿರುದ್ಧ ಗುಂಪಿನಲ್ಲಿ ಸೇರುವುದು
189(4) – ಕಾನೂನು ವಿರುದ್ಧವಾಗಿ ಮಾರಕ ಆಯುಧಗಳನ್ನು ಹಿಡಿಯುವ ಗುಂಪನ್ನು ಸೇರುವುದು
1 91(2)- ಒಂದೇ ಉದ್ದೇಶವನ್ನು ಪೂರ್ಣಗೊಳಿಸಲು ಕಾನೂನು ವಿರುದ್ಧ ಕೂಟದ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪಿತಸ್ಥನಾಗುತ್ತಾನೆ.
191(3) – ಮಾರಕ ಆಯುದ್ಧವನ್ನು ಹಿಡಿದು ದೊಂಬಿ ಮಾಡುವುದು
132 -ಸರ್ಕಾರಿ ನೌಕರನ ಮೇಲೆ ಹಲ್ಲೆ
118 – ಅಪಾಯಕಾರಿ ಆಯುಧಗಳು ಅಥವಾ ಸಾಧನಗಳ ಮೂಲಕ ಹಾನಿ
110 – ಮಾನವ ಹತ್ಯೆಗೆ ಯತ್ನ
121 (1) – ಸರ್ಕಾರಿ ನೌಕರನು ತನ್ನ ಕರ್ತವ್ಯ ನಿರ್ವಹಣೆ ಮಾಡದಂತೆ ಬೆದರಿಸುವುದು
352 – ಶಾಂತಿ ಭಂಗ ಮಾಡುವ ದೃಷ್ಟಿಯಿಂದ ಅಪಮಾನ ಮಾಡುವುದು
324 (4)- ಕೇಡು ಮತ್ತು 20 ಸಾವಿರ ರೂ. ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿ ಮಾಡುವುದು
324(5) – ಕೇಡು ಮತ್ತು 1 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿ ಮಾಡುವುದು