– ಶ್ರೀರಾಮನ ಶ್ಲೋಕ ಪಠಿಸಿ ಆರತಿ ಬೆಳಗಿದ ಮುಸ್ಲಿಂ ಮಹಿಳೆಯರು
ಲಕ್ನೋ: ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ. ಹಾಗಾಗಿಯೇ ಪ್ರತಿ ವರ್ಷ ರಾಮನವಮಿ ಆಚರಣೆ ಮಾಡಲಾಗುತ್ತದೆ. ಇಂತಹ ಹಬ್ಬಗಳ ಆಚರಣೆಗಳಿಗೆ ಯಾವುದೇ ಧರ್ಮ, ಜಾತಿಯ ಭೇದವಿಲ್ಲ. ಅದರಲ್ಲೂ ಭಾರತದಲ್ಲಿ ವಿವಿಧ ಧರ್ಮದ ಜನ ಕೂಡ ಹಬ್ಬ ಆಚರಣೆ ಮಾಡುವ ಮೂಲಕ ಏಕತೆ, ಪ್ರೀತಿ ಸಂದೇಶ ಸಾರುತ್ತಿದ್ದಾರೆ. ಇದಕ್ಕೆ ವಾರಣಾಸಿಯಲ್ಲಿ (Varanasi) ನಡೆದ ಪ್ರಸಂಗ ಸಾಕ್ಷಿಯಾಗಿದೆ.
ಶ್ರೀರಾಮನವಮಿಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು (Muslim Women) ಶ್ರೀರಾಮನ ಆರತಿ ನೆರವೇರಿಸುವ ಮೂಲಕ ಕೋಮು ಸೌಹಾರ್ಧತೆ, ಏಕತೆ, ಪ್ರೀತಿಯ ಸಂದೇಶ ಸಾರಿದ್ದಾರೆ. ಉರ್ದುವಿನಲ್ಲಿ ಬರೆದ ಶ್ಲೋಕಗಳನ್ನು ಪಠಣ ಮಾಡುತ್ತಾ ಬುರ್ಖಾ ಧರಿಸಿಯೇ ಶ್ರೀರಾಮನ ಆರತಿ ನೆರವೇರಿಸಿದ್ದಾರೆ. ಜೊತೆಗೆ ಜೈಶ್ರೀರಾಮ್ ಘೋಷಣೆಗಳನ್ನೂ ಕೂಗಿದ್ದಾರೆ. ಇದನ್ನೂ ಓದಿ: ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!
ಮುಸ್ಲಿಂ ಮಹಿಳಾ ಫೌಂಡೇಶನ್ ಮತ್ತು ವಿಶಾಲ ಭಾರತ ಸಂಸ್ಥಾನದ ಜಂಟಿ ಆಶ್ರಯದಲ್ಲಿ, ಲಮ್ಹಿಯ ಸುಭಾಷ್ ಭವನದಲ್ಲಿ ಶ್ರೀರಾಮ ಮಹಾ ಆರತಿ ಆಯೋಜಿಸಲಾಗಿತ್ತು. ಈ ವೇಳೆ ಮುಸ್ಲಿಂ ಮಹಿಳೆಯರು ಸಹ ರಂಗೋಲಿಯ ಮೇಲೆ ಜೈಶ್ರೀರಾಮ್ ಎಂದು ಬರೆದು ರಾಮಶ್ಲೋಕವನ್ನು ಪಠಿಸಿದ್ದಾರೆ. ಹಿಂದೂ ಮಹಿಳೆಯರೊಂದಿಗೆ ಸೇರಿ ರಾಮನವಮಿ ಆಚರಿಸುವ ಮೂಲಕ ಹಿಂದೂ-ಮುಸ್ಲಿಂ ಭಾಯಿ ಭಾಯಿ ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ
ಈ ವೇಳೆ ವಿಶಾಲ ಭಾರತ ಸಂಸ್ಥಾನದ ಡಾ.ನಜ್ಮಾ ಪರ್ವೀನ್ ಮಾತನಾಡಿ, ರಾಮನವಮಿ ನಮ್ಮ ದೇಶದ ಸಂಸ್ಕೃತಿಯ ಭಾಗವಾಗಿದೆ. ಪ್ರೀತಿಯ ಸಂದೇಶ ನೀಡಲು, ಸಂಸ್ಕೃತಿ ಅನುಸರಿಸಲು ಏಕೆ ಹಿಂಜರಿಕೆ ಬೇಕು. ಈ ದೇಶ ನಮ್ಮದು, ನಮ್ಮ ಪೂರ್ವಜರು ಇಲ್ಲಿಂದಲೇ ಬಂದವರು, ರಾಮ್ ಜಿ ಕೂಡ ನಮ್ಮವರೇ. ಅವರ ಆರತಿ ಮಾಡುವುದರಲ್ಲಿ ನಮಗೆ ಹೆಮ್ಮೆ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್ಐಆರ್