ತಿರುವನಂತಪುರಂ: ಇರಾನ್‌ನಲ್ಲಿ (Iran) ನಡೆಯುತ್ತಿರುವ ಹಿಜಾಬ್ (Hijab) ಪ್ರತಿಭಟನೆಗೆ ಕೇರಳದ (Kerala) ಮುಸ್ಲಿಂ ಮಹಿಳೆಯರು (Muslim Women) ಕೈಜೋಡಿಸಿದ್ದಾರೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಸ್ಲಿಂ ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದು ಭಾರತದಲ್ಲಿ ಹಿಜಬ್ ಸುಟ್ಟಿರುವ ಮೊದಲ ವರದಿಯಾಗಿದೆ.
Young Muslim Women Burn Hijabs In Kerala, Protest In Solidarity With Iran Anti-Hijab Movement#TNShorts pic.twitter.com/9ZMVZpW5gY
— TIMES NOW (@TimesNow) November 7, 2022
ಕೋಝಿಕೋಡ್‌ನಲ್ಲಿ (Kozhikode) ನಡೆದ ಕಾರ್ಯಕ್ರಮದಲ್ಲಿ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಬ್ ವಿರೋಧಿ ಚಳವಳಿಗೆ ಒಗ್ಗಟ್ಟಿನಿಂದ ಮುಸ್ಲಿಂ ಮಹಿಳೆಯರು ಹಿಜಬ್ ಅನ್ನು ಸುಟ್ಟು ಹಾಕಿದ್ದಾರೆ. ಸಂಘಟನೆಯ 6 ಮುಸ್ಲಿಂ ಮಹಿಳೆಯರು ಹಿಜಬ್ ಸುಡುವ ಕ್ರಮದ ನೇತೃತ್ವವಹಿಸಿದ್ದರು. ಇದನ್ನೂ ಓದಿ: ಅನಾರೋಗ್ಯದ ಮಗುವಿದ್ರೆ ಲೈಫ್ ಎಂಜಾಯ್ ಮಾಡಲು ಸಾಧ್ಯವಿಲ್ಲ – ವೈದ್ಯೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಯುಕ್ತಿವಾದಿ ಸಂಗಮ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಮುಕ್ತ ಚಿಂತನೆ ವಿಷಯದ ಕುರಿತು ಪ್ರತಿ ವರ್ಷ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತದೆ. ಈ ಬಾರಿ ಸಂಘಟನೆಯ ಭಾಗವಾಗಿರುವ ಮುಸ್ಲಿಂ ಮಹಿಳೆಯರು ಸೇರಿದಂತೆ ನಾನಾ ಧರ್ಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇರಾನ್‌ನಲ್ಲಿ ನಡೆದ ಘಟನೆಗಳಿಂದ ಪ್ರೇರಿತರಾಗಿ ಮುಸ್ಲಿಂ ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟಿಸಿದ್ದಾರೆ. ಇದನ್ನೂ ಓದಿ: BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ